Wednesday, September 17, 2025

Latest Posts

ಚುನಾವಣಾ ಸಮಯದಲ್ಲಿ ದಾಖಲೆ ರಹಿತ ವಸ್ತು ಮತ್ತು ಹಣ ರವಾನೆಗೆ ಮುಂದಾದರೆ ಹುಷಾರ್ ಪೋಲಿಸರ ಕಣ್ಣು ನಿಮ್ಮ ಮೇಲಿದೆ.

- Advertisement -

political news:

ವಿಧಾನಸಭಾ ಚುನಾವಣೆ ಹತ್ತಿರ ಬರುತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು  ಮನವೊಲಿಸಲು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತಿದ್ದಾರೆ. ಮತದಾರರಿಗೆ ಉಡುಗೊರೆ ರೂಪದಲ್ಲಿ ಗೃಹಪಯೋಗಿ ವಸ್ತುಗಳನ್ನು ಮತ್ತು ಯುವಕರಿಗೆ ಕ್ರೀಡಾ ಸಾಮಾಗ್ರಿಗಳನ್ನು ಮತ್ತು ಮಹಿಳೆಯರಿಗೆ ಸೀರೆ, ಹಣ ಮತ್ತು ಇನ್ನಿತರ ವಸ್ತುಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತಿದ್ದಾರೆ.

ಆದರೆ ಚುನಾವಣಾ ಅಯೋಗ ಇದಕ್ಕೆಲ್ಲ ಕಡಿವಾಣ ಹಾಕಲು, ಎಚ್ಚೆತ್ತುಕೊಂಡ ಆಯೋಗದ ಅಧಿಕಾರಿಗಳು ಪೋಲಿಸ್ ಇಲಾಖೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಸೂಚನೆ ನೀಡಿದೆ. ಅನುಮಾನಾಸ್ಪದವಾಗಿ ಮತ್ತು ದಾಖಲೆ ರಹಿತ ವಸ್ತುಗಳು ಮತ್ತು ದಾಖಲೆ ರಹಿತ ಹಣ ರವಾನೆಗೆ ಮುಂದಾಗಿರುವವರನ್ನು ಪೋಲೀಸ್ ಇಲಾಖೆ ಸೀಜ್ ಮಾಡಿ ತೆಕ್ಕೆಗೆ ಪಡೆದುಕೊಳ್ಳುತ್ತಿದೆ.ಇದೇ ರೀತಿ ದಾಖಲೆ ರಹಿತ ಹಣ ಮತ್ತು ವಸ್ತುಗಳನ್ನು ಸಾಗಿಸುತಿದ್ದವರು ಮತ್ತು ಪೊಲಿಸ್ ಇಲಾಖೆಯ ಅಧಿಕಾರಿಗಳು ಸೀಜ್ ಮಾಡಿರುವ ಕೆಲವು ಮಾಹಿತಿಗಳು ನಿಮ್ಮ ಮುಂದಿವೆ.

ಗದಗ ಜಿಲ್ಲೆಯ ಮುಳಗುಂದ ಪೊಲೀಸರು ಸೂಕ್ತ ದಾಖಲೆ ಇಲ್ಲದ 5.2 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ. ಬಸಾಪೂರ ಚೆಕ್​ ಪೋಸ್ಟ್​ನಲ್ಲಿ ಟಿ-ಶರ್ಟ್, ಬಟ್ಟೆಗಳು, ಚಪ್ಪಲಿ ಸೇರಿಂದತೆ ಹಲವು ವಸ್ತುಗಳನ್ನು ಸೀಜ್ ಮಾಡಲಾಗಿದೆ. ಸೂಕ್ತ ದಾಖಲೆ ಇಲ್ಲದೆ ಕ್ಯಾಂಟರ್ ವಾಹನದಲ್ಲಿ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಬೆಂಗಳೂರಿನಿಂದ ಗದಗ ಕಡೆಗೆ ಹೊರಟ್ಟಿದ್ದ ವಾಹನದಲ್ಲಿ ಪುರುಷರು-ಮಹಿಳೆಯರ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ.

ಜಕ್ಕೂರು ಬಳಿ ಜಿಎಸ್​​ಟಿ ಅಧಿಕಾರಿಗಳು ಕುಕ್ಕರ್, ಗಡಿಯಾರ, ಪಾತ್ರೆಗಳಿಟ್ಟಿದ್ದ ಗೋದಾಮಿನ ಮೇಲೆ ದಾಳಿ ನಡೆಸಿ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಬ್ಯಾಟರಾಯನಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುನೇಂದ್ರ ಕುಮಾರ್​​ ಅವರಿಗೆ ಸೇರಿದ ವಸ್ತುಗಳು ಎನ್ನಲಾಗಿದೆ. ಜಕ್ಕೂರು ಬಳಿ ಗೋದಾಮಿನಲ್ಲಿಟ್ಟಿದ್ದ ವಸ್ತುಗಳನ್ನು ಮತದಾರರಿಗೆ ಹಂಚಲು ಇಟ್ಟಿದ್ದ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ಮಾಡಿ ಅಧಿಕಾರಿಗಲು ಸೀಜ್​ ಮಾಡಿದ್ದಾರೆ.

ಪಕ್ಷದ ಚಿಹ್ನೆ ಬಿಡುಗಡೆ ಜೊತೆಗೆ ಭರವಸೆಯ ಪ್ರಣಾಳಿಕೆ ಬಿಡುಗಡೆ ಮಾಡಿದ ಗಾಲಿ ಜನಾರ್ದನ ರೆಡ್ಡಿ

ಮುಳಬಾಗಿಲು ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಪ್ರಚಾರ

ಶಿರಾ ಕ್ಷೇತ್ರದಲ್ಲಿ ನಡೆದ ಶಾಸಕ ನೇತೃತ್ವದ ವಿಜಯ ಸಂಕಲ್ಪ ಯಾತ್ರೆ

- Advertisement -

Latest Posts

Don't Miss