Monday, July 22, 2024

Latest Posts

ಕೈ ಕೊಟ್ಟ ಚೀನಾ…ಏಕಾಂಗಿ ಆದ ಪಾಕ್..!

- Advertisement -

ಕಾಶ್ಮೀರಕ್ಕೆ ಸಂಭಂದಿಸಿದಂತೆ ಭಾರತ ಕೈಗೊಂಡ ಐತಿಹಾಸಿಕ ನಿರ್ಧಾರವನ್ನು ಪ್ರಶ್ನಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಪಡೆಯಲು ಮುಂದಾದ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ವಿರುದ್ದ, ವಿಶ್ವಸಮುದಾಯದ ಮೊರೆಹೋಗಿದ್ದ ಪಾಕಿಸ್ತಾನ ಈಗ ಏಕಾಂಗಿ.

ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಪಾಕ್ ಕೋರಿಕೆಯನ್ನು ವಿಶ್ವಸಂಸ್ಥೆ ಹಾಗೂ ಅಮೆರಿಕ ಸಾರಾಸಗಟಾಗಿ ತಳ್ಳಿಹಾಕಿದ ಬೆನ್ನಲ್ಲೇ. ಪಾಕ್​ನ ಪರಮಾಪ್ತ ಚೀನಾ ಕೂಡ ಈಗ ಕೈಕೊಟ್ಟಿದೆ. ಅಷ್ಟೇ ಅಲ್ಲದೆ ದ್ವಿಪಕ್ಷೀಯ ಮಾತುಕತೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದೆ. ಜೊತೆಗೆ ಈ ವಿಷಯವಾಗಿ ಚೀನಾ, ಅಂತರ ಕಾಯ್ದುಕೊಂಡಿದೆ. ಈ ಹಿಂದೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ,
ಮಧ್ಯಸ್ಥಿಕೆ ಕೋರಿ ಬರೆದಿದ್ದ ಪತ್ರಕ್ಕೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟಾನಿಯೋ ಗುಟೆರೆಸ್ ಪ್ರತಿಕ್ರಿಯಿಸಿದ್ದು, ‘ಶಿಮ್ಲಾ ಒಪ್ಪಂದದ ಪ್ರಕಾರ ಕಾಶ್ಮೀರ ವಿಚಾರದಲ್ಲಿ ತೃತೀಯ ವ್ಯಕ್ತಿಯ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆಯಷ್ಟೇ ಈ ವಿಚಾರದ ಬಗ್ಗೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ವಕ್ತಾರ
ಮಾತನಾಡಿದ್ದು ಜಮ್ಮು-ಕಾಶ್ಮೀರದ ಸ್ಥಿತಿ ಬಗ್ಗೆ ಗಮನ ಇರಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ 1972ರಲ್ಲಿ ಶಿಮ್ಲಾ ಒಪ್ಪಂದವಾಗಿದ್ದು, ಈ ವಿಚಾರದಲ್ಲಿ ಮೂರನೆಯವರ ಮಧ್ಯಸ್ಥಿಕೆಗೆ ಅವಕಾಶವಿಲ್ಲ. ಆದರೆ ಈ ವಿಚಾರದ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡರೂ ಶಾಂತಿಪೂರ್ಣವಾಗಿರಬೇಕು ಎಂದಿದ್ದಾರೆ. ಇನ್ನೂ ಈ ಬಗ್ಗೆ ತನ್ನ ನಿಲುವು ಹೊರ ಹಾಕಿರುವ ಅಮೆರಿಕ ‘ಜಮ್ಮು -ಕಾಶ್ಮೀರ ವಿಚಾರದಲ್ಲಿ ಎದ್ದಿರುವ ವಿವಾದವನ್ನು ಭಾರತ ಮತ್ತು ಪಾಕಿಸ್ತಾನ ಯಾವ ರೀತಿ ಪರಿಹರಿಸಿಕೊಳ್ಳುತ್ತವೆ ಎನ್ನುವ ಬಗ್ಗೆ ನಿಗಾ ವಹಿಸಲಾಗಿದೆ. ಇವೆರಡೂ ದೇಶಗಳ ಜತೆಗೆ ಅಮೆರಿಕ ಉತ್ತಮ ಬಾಂಧವ್ಯ ಹೊಂದಿದೆ.

ಹೀಗಾಗಿ ಈ ಸಮಸ್ಯೆಯನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದೇ ಉತ್ತಮ’ ಎಂದು ಸ್ಪಷ್ಟಪಡಿಸಿದೆ. ಈ ನಡುವೆ ಭಾರತದ ಜೊತೆಗಿನ ವ್ಯಾಪಾರ ವಹಿವಾಟು ಒಪ್ಪಂದ ರದ್ದುಗೊಳಿಸುವ ತೀರ್ಮಾನ ಕೈಗೊಂಡ ಪಾಕಿಸ್ತಾನಕ್ಕೆ ಎರಡೇ ದಿನದಲ್ಲಿ ಆರ್ಥಿಕ ಆಘಾತ ಎದುರಾಗಿದೆ. ಷೇರು ಮಾರುಕಟ್ಟೆ ಒಂದೇ ಬಾರಿಗೆ 800 ಅಂಕಗಳಷ್ಟು ಕುಸಿತ ಕಂಡಿದೆ. ಅಷ್ಟೇ ಅಲ್ಲದೇ ಪಾಕ್ ರೂಪಾಯಿ ಮೌಲ್ಯವೂ ಪಾತಾಳಕ್ಕೆ ಇಳಿದಿದೆ.

https://www.youtube.com/watch?v=GGG-f3ESVUQ
- Advertisement -

Latest Posts

Don't Miss