Thursday, October 23, 2025

Latest Posts

ವಿಶ್ವ ಕದನ ವಿರಾಮಕ್ಕೆ ಪ್ರಸ್ತಾಪಿಸಿದ ತ್ರಿಸದಸ್ಯ ಸಮಿತಿಯಲ್ಲಿ ಪ್ರಧಾನಿ ಮೋದಿ ಹೆಸರು

- Advertisement -

MEXICAN:

ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳ ಮಧ್ಯೆ, ವಿಶ್ವದಾದ್ಯಂತ ಯುದ್ಧಗಳಿಲ್ಲದೆ ಐದು ವರ್ಷಗಳ ಕದನ ವಿರಾಮವನ್ನು ಉತ್ತೇಜಿಸುವ ಉದ್ದೇಶದಿಂದ  ಆಯೋಗವನ್ನು ಸ್ಥಾಪಿಸಬೇಕೆಂದು ಮೆಕ್ಸಿಕನ್ ಅಧ್ಯಕ್ಷ  ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ [Andres mannuel lopez obrador] ಪ್ರಸ್ತಾವನೆಯೊಂದನ್ನು ವಿಶ್ವಸಂಸ್ಥೆಗೆ ಸಲ್ಲಿಸಲು ನಿರ್ಧರಿಸಿದ್ದಾರೆ.

ಪೋಪ್ ಫ್ರಾನ್ಸಿಸ್,ಯು ಎನ್ ಸೆಕ್ರಟರಿ ಜನರಲ್ ಆಂಟೋನಿಯೋ  ಗುಟೆರಸ್ ಹಾಗು ಭಾರತದ ಪ್ರಧಾನಿ ನರೇಂದ್ರ ಮೋದಿ [Narendra modi]ಸೇರಿದಂತೆ ಈ ಮೂವರು ವ್ಯಕ್ತಿಗಳ ಸಮಿತಿ ಸ್ಥಾಪಿಸಲು ನಿರ್ಧರಿಸಿದ್ದಾರೆ.

ಮೆಕ್ಸಿಕನ್ ಅಧ್ಯಕ್ಷ  ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ವರದಿಯಲ್ಲಿ ಹೇಳುವ ಪ್ರಕಾರವಾಗಿ “ನಾನು ಅದನ್ನು ಹೇಳುತ್ತಲೇ ಇದ್ದೇನೆ ಮತ್ತು ಅದನ್ನು ಪ್ರಸಾರ ಮಾಡಲು ಮಾಧ್ಯಮಗಳು ನಮಗೆ ಸಹಾಯ ಮಾಡುತ್ತವೆ ಎಂಬುವುದನ್ನು ನಾನು ಭಾವಿಸುತ್ತೇನೆ. ಏಕೆಂದರೆ ಅವರಿಗೆ ಅನುಕೂಲವಾಗದಿದ್ದಾಗ ಅವರು ಮಾತನಾಡುವುದಿಲ್ಲ “ ಎಂಬುವುದಾಗಿ ಎಂಎಸ್ಎನ್ ಡಾಟ್ ಕಾಂ ನಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಪೋಪ್ ಫ್ರಾನ್ಸಿಸ್, ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮೂವರು ವ್ಯಕ್ತಿಗಳ ಸಮಿತಿಯನ್ನು ಪ್ರಸ್ತಾಪಿಸಲು ಅವರು ನಿರ್ಧರಿಸಿದ್ದಾರೆ.

ಮೆಕ್ಸಿಕನ್ ಅಧ್ಯಕ್ಷರ ಪ್ರಕಾರವಾಗಿ  ಮೂವರೂ ಒಟ್ಟಾಗಿ ಸೇರುವುದು, ಪ್ರಪಂಚದಾದ್ಯಂತ ಯುದ್ಧವನ್ನು ಕೊನೆಗೊಳಿಸುವ ಯೋಜನೆಯನ್ನು ತ್ವರಿತವಾಗಿ ಸಲ್ಲಿಸುವುದು ಹಾಗು ಕನಿಷ್ಠ 5 ವರ್ಷಗಳ ಕಾಲ ಕದನ ವಿರಾಮಕ್ಕಾಗಿ ತಿಳುವಳಿಕೆಗೆ ಬರುವುದು  ಇದರ ಗುರಿಯಾಗಿದೆ. ಯುದ್ಧದ ಪರಿಸ್ಥಿತಿಗಳನ್ನು ಕೊನೆಗೊಳಿಸಲು ಮತ್ತು ಶಾಂತಿ ಸ್ಥಾಪನೆಗಾಗಿ ಕೆಲಸ ಮಾಡಲು ಯುಎಸ್, ಚೀನಾ ಮತ್ತು ರಷ್ಯಾದೇಶಗಳು ಪ್ರಯತ್ನಗಳನ್ನು ಮಾಡುವಂತೆ ಮೆಕ್ಸಿಕನ್ ಅಧ್ಯಕ್ಷ ಒಬ್ರಡಾರ್ ಒತ್ತಾಯಿಸಿದ್ದಾರೆ.

ಸರಪಳಿ ಸಮಸ್ಯೆ ಹಾಗೆಯೇ ದಾಖಲೆಯ ಹಣದುಬ್ಬರ ಸಮಸ್ಯೆಗಳಿಂದ ಬಳಲುತ್ತಿರುವ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿನ ಭೌಗೋಳಿಕ ಮತ್ತು ರಾಜಕೀಯ ಉದ್ವಿಗ್ನತೆಯಿಂದ ಋಣಾತ್ಮಕವಾಗಿ ಪರಿಣಾಮ ಬೀರುತ್ತಿದೆ ಎಂಬುವುದಾಗಿ ಅವರು ಹೇಳಿದ್ದಾರೆ.

ಜಗತ್ತಿನಾದ್ಯಂತ ದೇಶಗಳು ತಮ್ಮಲ್ಲಿನ  ವ್ಯಾಪಾರ ಸಂಘರ್ಷಗಳನ್ನು ನಿಲ್ಲಿಸಬೇಕು. ಹಾಗೆಯೇ ತಮ್ಮ ಸಂಬಂಧಿತ ಬದ್ಧತೆಗಳ ಬಗ್ಗೆ ನಿಗಾ ಇಡಲು ವಿಶ್ವಸಂಸ್ಥೆಯ ಚೌಕಟ್ಟನ್ನು ಬಳಸಬೇಕು ಎಂಬುವುದಾಗಿ ಅವರು ಹೇಳಿದರು. ಯುದ್ಧ ವಿರಾಮದ ಸಮಯದಲ್ಲಿ, ರಾಷ್ಟ್ರಗಳು ಹಿಂದುಳಿದವರಿಗೆ ಸೇವೆ ಸಲ್ಲಿಸಲು ಹಾಗು ಜಗತ್ತಿನಾದ್ಯಂತ ಆರ್ಥಿಕ ಅಭಿವೃದ್ಧಿಯನ್ನು ಮುನ್ನಡೆಸಲು ಸಹಕರಿಸಬೇಕೆಂದು ಒಬ್ರಡಾರ್ ಮನವಿ ಮಾಡಿಕೊಂಡಿದ್ದಾರೆ.

- Advertisement -

Latest Posts

Don't Miss