Friday, July 4, 2025

Latest Posts

ಪಿಯು ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ!

- Advertisement -

ಹಿಜಾಬ್ ವಿವಾದದಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ನಂತರ, 2022-23ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳು ಗುರುವಾರದಿಂದ ಆರಂಭವಾಗಲಿದ್ದು, ಕಾಲೇಜು ಅಭಿವೃದ್ಧಿ ಸಮಿತಿ ಸೂಚಿಸಿದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸುವುದು ಕಡ್ಡಾಯ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಸಮಾನತೆಯ, ಏಕತೆ ಕಾಪಾಡುವ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಆಗದ ಉಡುಪು ಧರಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ.

ಪದವಿ ಪೂರ್ವ ತರಗತಿಗೆ ಜೂನ್ 1ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ದಂಡ ಶುಲ್ಕವಿಲ್ಲದೆ ದಾಖಲಾತಿ ಪಡೆಯಲು ಜೂನ್ 15 ಕೊನೆಯ ದಿನವಾಗಿದೆ. ಬೆಳಿಗ್ಗೆ 9.30ರಿಂದ 3.30ರವರೆಗೆ ಅಥವಾ 10.30ರಿಂದ 4.30ರವರೆಗೆ ತರಗತಿಗಳನ್ನು ನಡೆಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

ಜೂನ್ 9ರಿಂದ ಸೆಪ್ಟೆಂಬರ್ 30ರ ವರೆಗೆ ಶೈಕ್ಷಣಿಕ ವರ್ಷದ ಮೊದಲ ಅವಧಿ ನಡೆಯಲಿದ್ದು, ಅಕ್ಟೋಬರ್ 13ರಿಂದ 2023ರ ಮಾರ್ಚ್ 31ರ ವರೆಗೆ ಎರಡನೇ ಅವಧಿ ನಡೆಯಲಿದೆ. ಅಕ್ಟೋಬರ್ 1ರಿಂದ 12ರ ವರೆಗೆ ಮಧ್ಯಂತರ ರಜೆ ಇದ್ದು, 2023 ಏಪ್ರಿಲ್ 1ರಿಂದ ಬೇಸಿಗೆ ರಜೆ ನಿಗದಿಪಡಿಸಲಾಗಿದೆ.

 

- Advertisement -

Latest Posts

Don't Miss