1947ರಲ್ಲಿ ಪಾಕಿಸ್ತಾನ ಅನ್ನೋದು ಯಾವಾಗ ಉದಯ ಆಯ್ತೋ, ಅವಾಗ್ಲಿಂದನೇ ಭಾರತ ಪಾಕದ ನಡುವೆ ವೈರತ್ವ ಅನ್ನೋದು ಕೂಡ ಉದಯಾಯಿತು. ಇಂಥ ಪಾಕಿಸ್ತಾನ ಕಾಲು ಕೆರೆದುಕೊಂಡು 4 ಬಾರಿ ಭಾರತದ ಮೇಲೆ ಯುದ್ಧ ಮಾಡಿದೆ. ಈಗಲೂ ಕೂಡ ಗಡಿ ಕದನ ಮುಂದುವರೆಸುತ್ತಲೇ ಇದೆ. ಪಾಕಿಸ್ತಾನದ ಬುದ್ಧಿ ಗೊತ್ತಿದ್ರು ಭಾರತ ಆದೇಶವನ್ನ ತನ್ನ ಫ್ರೆಂಡ್ ಅಂತ ಹೇಳಿಕೊಳ್ಳುತ್ತಾನೆ ಇದೆ.
1947 ರಿಂದಲೂ ಭಾರತ ಪಾಕಿಸ್ತಾನದ ಜೊತೆ ಸ್ನೇಹ ಸಂಬಂಧ ವೃದ್ಧಿಸಲು ಸಾಕಷ್ಟು ಪ್ರಯತ್ನಿಸಿದೆ. ಆದರೆ ಪಾಕಿಸ್ತಾನ ಮಾತ್ರ ತನ್ನ ಕುತಂತ್ರ ಬುದ್ಧಿ ತೋರಿಸುವುದನ್ನು ಬಿಟ್ಟಿರಲಿಲ್ಲ. ಪಾಕಿಸ್ತಾನದ ಕಪಟಿ ಬುದ್ದಿ ಎಂಥದ್ದು ಅನ್ನೋದು ಈಗಾಗಲೇ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಆದ್ರೂ ಈಗ ಕೇಂದ್ರ ಸರ್ಕಾರ ಪಾಕ್ ವಿಚಾರದ ತನ್ನ ನೀತಿಯಲ್ಲಿ ಬದಲಾವಣೆ ತರುವ ಸುಳಿವು ನೀಡಿದೆ.
ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂತಹದೊಂದು ಸುಳಿವು ನೀಡಿದ್ದಾರೆ.. ಪಾಕಿಸ್ತಾನದ ಜೊತೆ ನಾವು ಉತ್ತಮ ಬಾಂಧವ್ಯ ಹೊಂದುತ್ತೇವೆ ಎಂದಿದ್ದಾರೆ. ಆದರೆ ಗಡಿಯುದ್ದಕ್ಕೂ ನಡೆಯುವ ಸಕಾರಾತ್ಮಕ ಅಥವಾ ನಕಾರಾತ್ಮಕ ಬೆಳವಣಿಗೆಗಳಿಗೆ ತಕ್ಕಂತೆ ನಾವು ಉತ್ತರಿಸುತ್ತೇವೆ ಅಂತಲೂ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ.. ಪಾಕಿಸ್ತಾನದ ವಿಚಾರದಲ್ಲಿ ನಾವು ಯಾವತ್ತೂ ಜಡತ್ವವನ್ನು ಹೊಂದಿಲ್ಲ, ನಾವು ಪಾಕ್ ವಿರುದ್ಧ ಎಂದಿಗೂ ಕೆಡುಕನ್ನು ಬಯಸೇ ಇಲ್ಲ. ಆದರೆ ಅವರ ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯಿಸುತ್ತೇವೆ ಅಂತ ಜೈಶಂಕರ್ ಹೇಳಿದ್ರು. ಭಾರತದ ವಿದೇಶಾಂಗ ಸಚಿವರ ಹೇಳಿಕೆಯನ್ನು ಗಮನಿಸಿದರೆ ಮೋದಿ ಸರ್ಕಾರ ಕೂಡ ಪಾಕಿಸ್ತಾನದ ವಿರುದ್ಧ ವೈರತ್ವ ಬಯಸಿಲ್ಲ. ಪಾಕಿಸ್ತಾನ ಭಾರತದ ಬಗ್ಗೆ ಯಾವ ರೀತಿ ನಡೆದುಕೊಳ್ಳುತ್ತೋ ಅದಕ್ಕೆ ತಕ್ಕಂತೆ ರಿಯಾಕ್ಟ್ ಮಾಡುತ್ತೇವೆ ಅಂತ ಮತ್ತೆ ಸ್ಪಷ್ಟ ಮಾತುಗಳಿಂದ ಹೇಳಿದೆ.