Sunday, June 1, 2025

Latest Posts

ಮೊಬೈಲ್ ಫೋನ್, ಚಿನ್ನ- ಬೆಳ್ಳಿ ಕೊಳ್ಳುವವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಬಜೆಟ್

- Advertisement -

Union Budget 2024: ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಮೊಬೈಲ್ ಫೋನ್ ಖರೀದಿಸುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಯಾಕಂದ್ರೆ ಮೊಬೈಲ್ ಬೆಲೆ, ಮೊಬೈಲ್ ಚಾರ್ಜರ್, ಮೊಬೈಲ್ ಪಾರ್ಟ್ಸ್‌ಗಳ ಬೆಲೆ ಕಡಿಮೆ ಮಾಡಲಾಗಿದೆ.

ಕಳೆದ 6 ವರ್ಷಗಳಲ್ಲಿ ದೇಶಿಯ ಉತ್ಪಾದನೆಯ ಪ್ರಮಾಣ ಹೆಚ್ಚಾಗಿದ್ದು, ಮೊಬೈಲ್ ರಫ್ತಿನ ಪ್ರಮಾಣ 100 ಪಟ್ಟು ಹೆಚ್ಚಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಹಾಗಾಗಿ ಮೊಬೈಲ್ ಆಮದು ಸುಂಕವನ್ನು ಶೇ.15%ರಿಂದ 10%ಕ್ಕೆ ಇಳಿಸಲಾಾಗಿದೆ.

ಇನ್ನು 3 ಕ್ಯಾನ್ಸರ್ ಔಷಧದ ಬೆಲೆಯನ್ನು ಇಳಿಸಲಾಗಿದೆ. ಚಿನ್ನ-ಬೆಳ್ಳಿ ಆಮದು ಸುಂಕ ಕಡಿಮೆ ಮಾಡಲಾಗಿದೆ. ಹಾಗಾಗಿ ಚಿನ್ನ- ಬೆಳ್ಳಿ ಖರೀದಿಸುವವರಿಗೂ ಕೂಡ ಗುಡ್ ಬಜೆಟ್ ಅಂತಾನೇ ಹೇಳಬಹುದು. ಸಮುದ್ರದದ ಆಹಾರ, ಪ್ಲಾಟಿನಂ, ಪಾದರಕ್ಷೆ ಪೆಟ್ರೋಕೆಮಿಕಲ್, ಚರ್ಮದ ವಸ್ತು, ಎಕ್ಸರೇ ಮಷಿನ್ ಎಲ್ಲವೂ ಅಗ್ಗವಾಗಿದೆ. ಪ್ಲಾಸ್ಟಿಕ್, ಸೋಲಾರ್ ಗ್ಲಾಸ್, ದೂರಸಂಪರ್ಕ ಸಲಕರಣೆ ಎಲ್ಲವೂ ದುಬಾರಿಯಾಗಿದೆ.

- Advertisement -

Latest Posts

Don't Miss