ಪ್ರಧಾನಿ ಹುಟ್ಟುಹಬ್ಬ ಹಿನ್ನೆಲೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Political News: ಇಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಹಿನ್ನೆಲೆ, ದೇಶದ ಹಲವೆಡೆ ಮೋದಿ ಅಭಿಮಾನಿಗಳು, ಬಿಜೆಪಿಗರು ಹಲವು ಕಾಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅನ್ನ ಸಂತರ್ಪಣೆ, ರಕ್ತದಾನ ಶಿಬಿರ, ಹೀಗೆ ಅರ್ಥಪೂರ್ಣ ಕಾರ್ಯಕ್ರಮಗಳು ನಡೆದವು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಕೂಡ, ಇಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಾರತದ ಸ್ವಚ್ಛತೆಯನ್ನು ಪ್ರತಿಪಾದಿಸಿದವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು. ಬಾಪೂಜಿ ಕನಸು ನನಸು ಮಾಡಿದವರು ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು. ಸ್ವಚ್ಚ ಭಾರತ ಎನ್ನುವುದು ಬರೀ ಅಭಿಯಾನವಷ್ಟೇ ಅಲ್ಲ, ಅದನ್ನು ನಿತ್ಯ ಆಚರಣೆಯಾಗಿ ಪರಿವರ್ತಿಸಿದ್ದು ನಮ್ಮ ಪ್ರಧಾನಿಗಳು ಎನ್ನುವುದು ನನ್ನ ಅಭಿಮತ.

ಮಾನ್ಯ ಪ್ರಧಾನಿಗಳ ಜನ್ಮದಿನವಾದ ಇಂದು ನಾನು ಬಿಲಾಯ್ ಉಕ್ಕು ಕಾರ್ಖಾನೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡೆ. ಕಾರ್ಖಾನೆಯ ಕಾರ್ಮಿಕರು, ಅಧಿಕಾರಿಗಳು ನನ್ನೊಂದಿಗೆ ಭಾಗಿಯಾದರು. ಮತ್ತೊಮ್ಮೆ ಪ್ರಧಾನಿಗಳಿಗೆ ಹೃದಯಪೂರ್ವಕವಾಗಿ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಬಯಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

About The Author