BREAKING NEWS: ಪೆಟ್ರೋಲ್ ಲೀಟರ್​ಗೆ 9.5 ರೂ, ಡೀಸೆಲ್ 7 ರೂ ಇಳಿಕೆ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

ನವದೆಹಲಿ: ಕೇಂದ್ರ ಸರ್ಕಾರದಿಂದ ಇಂದು ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ ₹ 8 ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ ₹ 6 ರಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಷ್ಟೇ ಅಲ್ಲದೇ ರಸಗೊಬ್ಬರ ದರ, ಸಿಮೆಂಟ್ ದರ ಕೂಡ ಇಳಿಕೆ ಮಾಡಿದೆ.

ಇಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ ₹ 8 ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ ₹ 6 ರಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದಾಗಿ ಪೆಟ್ರೋಲ್ ಲೀಟರ್​ಗೆ 9.5 ರೂ, ಡೀಸೆಲ್ 7 ರೂ ಇಳಿಕೆಯಾದಂತೆ ಆಗಿದೆ. ಈ ಮೂಲಕ ವಾಹನ ಸವಾರರಿಗೆ ಭರ್ಜರಿ ಸಿಹಿಸುದ್ದಿ ನೀಡಲಾಗಿದೆ.

ಇನ್ನೂ ಪ್ರಸಕ್ತ ವರ್ಷದಿಂದ ಗರಿಷ್ಟ 12 ಸಿಲಿಂಡರ್ ವರೆಗೆ 200 ರೂ ಸಹಾಯ ಧನವನ್ನು ಅಡುಗೆ ಸಿಲಿಂಡರ್ ಮೇಲೆ ಘೋಷಿಸಲಾಗಿದೆ. ಈ ಮೂಲಕ ಅಡುಗೆ ಸಿಲಿಂಡರ್ ಅನಿಲ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಇದಲ್ಲದೇ ರಸಗೊಬ್ಬರ ಬೆಲೆ ಕೂಡ ಇಳಿಕೆ ಮಾಡಲಾಗಿದೆ. ಜೊತೆಗೆ ಸಿಮೆಂಟ್ ದರವನ್ನು ಇಳಿಸಿದೆ. ಈ ಮೂಲಕ ದೇಶದ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ.

About The Author