Thursday, April 24, 2025

Latest Posts

ಸಿಎಂ ರಾಜೀನಾಮೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹ..!

- Advertisement -

Hubli News: ಹುಬ್ಬಳ್ಳಿ: ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ನೂರಾರು ಕೋಟಿ ಅವ್ಯವಹಾರ ನಡೆದಿದ್ದರೂ ಕೂಡ ಯಾವುದೇ ತೀರ್ಮಾನಕ್ಕೆ ಬಾರದೇ ಇರುವುದು ಸಿಎಂ ಆಗಿ ವಿತ್ತ ಸಚಿವರಾಗಿರಲು ಯೋಗ್ಯರಲ್ಲ. ಈ ನಿಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.

ನಗರದಲ್ಲಿಂದು ನೂತನ ಮೇಯರ್ ಉಪಮೇಯರ್ ಅವರಿಗೆ ಶುಭ ಹಾರೈಸಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಆಂತರಿಕ ಜಗಳ ಸಿಎಂ ಡಿಸಿಎಂ ಸ್ಥಾನಕ್ಕೆ ಗುದ್ದಾಟದಿಂದ ರಾಜ್ಯದ ಆಡಳಿತ ವ್ಯವಸ್ಥೆ ಹಾಳಾಗಿದೆ. ಅಲ್ಲದೇ ಎಲ್ಲ ಶಾಸಕರು ಡಿಸಿಎಂ, ಸಿಎಂ ಬದಲಾವಣೆಯಲ್ಲಿ ನಿರತರಾಗಿದ್ದಾರೆ ವಿನಃ ಯಾರೊಬ್ಬರೂ ಕೂಡ ಅಭಿವೃದ್ಧಿ ಬಗ್ಗೆ ಕಾಳಜಿಯೇ ಇಲ್ಲವಾಗಿದೆ ಎಂದರು.

ಮುಖ್ಯಮಂತ್ರಿಗಳು ಒಳಜಗಳವನ್ನು ಬದಿಗಿಟ್ಟು ಜನರ ಆಶೋತ್ತರಗಳನ್ನು ಆಲಿಸುವ ಹಾಗೂ ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕು ವಿನಃ ನಿಮ್ಮ ಸರ್ಕಾರದ ಆಂತರಿಕ ಕಲಹ ಜನರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತಿರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.

- Advertisement -

Latest Posts

Don't Miss