Wednesday, February 5, 2025

Latest Posts

ಕೊರೊನಾಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬಲಿ

- Advertisement -

ಕರ್ನಾಟಕ ಟಿವಿ : ಕೇಂದ್ರ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಕೊರೊನಾಗೆ ಬಲಿಯಾಘಿದ್ದಾಋಎ.. ಕೊರೊನಾ ಸೊಂಕು ಹಿನ್ನೆಲೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಸುರೇಶ್ ಅಂಗಡಿ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.. ೨೦೦೪ರಿಂದ ಸತತವಾಗಿ ೪ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸುರೇಶ್ ಅಂಗಡಿ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವರಾಗಿ ಕರ‍್ಯನಿರ್ವಹಿಸಿದ್ರು.. ಸುರೇಶ್ ಅಂಗಡಿ ಸಾವು ರಾಜ್ಯ ಹಾಗೂ ದೇಶದ ಜನರಿಗೆ ಶಾಕಿಂಗ್ ನ್ಯೂಸ್ ಎಂದು ಹೇಳಬಹುದು. ಯಾಕಂದ್ರೆ ಸಾಕಷ್ಟು ಹಣ, ಅಧಿಕಾರ ಇದ್ದರೂ ಸುರೇಶ್ ಅಂಗಡಿಯನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.. ಯಾಕಂದ್ರೆ ಸಮಯ ಮೀರಿದ್ರೆ ಕೊರೊನಾಗೆ ಬಲಿ ಗ್ಯಾರಂಟಿ..

ಮಾಧ್ಯಮಗಳು ಕೊರೊನಾ ಮರೆತವು.. ಕೊರೊನಾ ಮಾತ್ರ ಹರಡೋದನ್ನ ಮರೆತಿಲ್ಲ

ಇನ್ನು ಮೊದಮೊದಲು ಕೊರೊನಾ ಬಗ್ಗೆ ಅತಿಯಾಗಿ ಜಪ ಮಾಡ್ತಿದ್ದ ಮಾಧ್ಯಮಗಳು ಇದೀ ಮರೆತು ಸಂಜನಾ, ರಾಗಿಣಿ ಡ್ರಗಸ್ ಜಪ ಮಾಡ್ತಿದೆ. ಕೊರೊನಾ ಬಗ್ಗೆ ಜಾಗೃತಿ ಮೂಡಿಸೋದನ್ನ ಮರೆತಿವೆ.. ಇತ್ತ ಖಾಸಗಿ ಆಸ್ಪತ್ರೆಯವರು ಸುಲಿಗೆ ಶುರು ಮಾಡಿದ ಕಾರಣ ಜನ ಕೂಡ ಚಿಕಿತ್ಸೆ ಪಡೆಯೋಕೆ ಮುಂದಾಗ್ತಿಲ್ಲ..ಕಳೆದೊAದು ತಿಂಗಳಿನಿAದ ಕನ್ಯಾಕುಮಾರಿ ಕಾಂಗ್ರೆಸ್ ಸಂಸದ ವಸಂತ್ ಕುಮಾರ್, ಹಾಗೆಯೇ ತಿರುಪತಿಯ ವೈಎಸ್‌ಆರ್‌ಸಿಪಿ ಪಕ್ಷದ ಸಂಸದ ಮತ್ತು ಕರ್ನಾಟಕದಿಂದ ರಾಝ್ಯ ಸಭೆಗೆ ಆಯ್ಕೆಯಾಗಿದ್ದ ಅಶೋಕ್ ಗಸ್ತಿ ಸಹ ಕೊರೊನಾಗೆ ಬಲಿಯಾಗಿದ್ದಾರೆ. ೧೫ ದಿನಗಳ ಹಿಂದೆಯಷ್ಟೆ ಭದ್ರವಾತಿ ಮಾಜಿ ಶಾಸಕ ಅಪ್ಪಾಜಿಗೌಡ ಸಹ ಕೊರೊನಾಗೆ ಬಲಿಯಾಗಿದ್ರು.. ಜನ ಕೊರೊನಾ ಬಗ್ಗೆ ಜಾಗೃತಿ ವಹಿಸಿ.. ಅಸಡ್ಡೆ ಬೇಡ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ

- Advertisement -

Latest Posts

Don't Miss