Tumakuru News: ತುಮಕೂರು: ಇಂದು ಕೇಂದ್ರ ಸಚಿವ ವಿ.ಸೋಮಣ್ಣ ಹುಟ್ಟುಹಬ್ಬ ಹಿನ್ನೆಲೆ, ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಸೋಮಣ್ಣ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪತ್ನಿ ಶೈಲಜಾ ಸೋಮಣ್ಣ ಕೂಡ ಉಪಸ್ಥಿತರಿದ್ದರು. ಗದ್ದುಗೆ ದರ್ಶನ ಪಡೆದ ಬಳಿಕ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮಿಜಿಗಳ ಆಶೀರ್ವಾದ ಪಡೆದ ಸೋಮಣ್ಣಗೆ, ಬಿಜೆಪಿ, ಜೆಡಿಎಸ್ ಮುಖಂಡರು, ಹೂಗುಚ್ಛ ನೀಡಿ ಶುಭಾಶಯ ಕೋರಿದರು.
ಸೋಮಣ್ಣಗೆ ಸಿಎಂ ಆಗುವ ಯೋಗ ತಪ್ಪಿಸಿಕೊಂಡ ಪಶ್ಚಾತಪವಿತ್ತಾ ಅನ್ನೋ ಪ್ರಶ್ನೆ ಇಂದು ಹಲವರಿಗೆ ಬಂದಿತ್ತು. ಏಕೆಂದರೆ, ಸೋಮಣ್ಣಗೆ ಕಾಂಗ್ರೆಸ್‌ನಲ್ಲಿದ್ದರೆ, ಸಿಎಂ ಆಗುವ ಯೋಗ ಇತ್ತು. ಆದರೆ ಬಿಜೆಪಿಗೆ ಬಂದು, ಆ ಯೋಗ ತಪ್ಪಿ ಹೋಯಿತು ಅನ್ನೋ ಪಶ್ಚಾತಾಪ ಇರುವಂತೆ ಕಾಣುತ್ತಿತ್ತು.
ಏಕೆಂದರೆ, ಸಿದ್ದಲಿಂಗ ಶ್ರೀಗಳ ಮುಂದೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಪ್ರಸ್ತಾಪ ಮಾಡಿದ್ದು, ಕೇಂದ್ರ ಸಚಿವ ವಿ ಸೋಮಣ್ಣಗೆ ಮುಖ್ಯಮಂತ್ರಿ ಸ್ಥಾನ ಸಿಗುವಂತೆ ಆಶಿರ್ವದಿಸಿ ಎಂದಿದ್ದಾರೆ. ಅವರಿಗೆ ಒಂದು ಆಸೆ ಇದೆ ಬಿಜೆಪಿಗೆ ಬಂದು…..ಕಾಂಗ್ರೇಸ್ ನಲ್ಲಿದ್ದಿದ್ರೆ ಮುಖ್ಯಮಂತ್ರಿಯಾಗ್ತಿದ್ರು ಎಂದು ಸುರೇಶ್ ಗೌಡ ಹೇಳಿದರು. ಇದಕ್ಕೆ ಉತ್ತರಿಸಿದ ಸ್ವಾಮೀಜಿಗಳು, ಸಿ ಎಂ ವಿಚಾರ ಪ್ರಸ್ತಾಪಕ್ಕೆ ಹಣೆ ಬರಹದಲ್ಲಿ ಬರೆದಿದ್ದರೆ ಆಗ್ತಾರೆ ಎಂದು ಹೇಳಿದರು.