ಮೀನಿನ ಹೊಟ್ಟೆಯಲ್ಲಿತ್ತು ವಿಸ್ಕಿ ಬಾಟಲ್; ಶಾಕ್ ಆದ ಮೀನುಗಾರ!

www.karnatakatv.net: ಅಂತರಾಷ್ಟ್ರೀಯ- ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲ್ ಸಿಕ್ಕಿದೆ, ಇದು ನಿಮಗೆ ಶಾಕ್ ಅನ್ಸಿದ್ರು ನಿಜ.. ಮೀನುಗಾರನೊಬ್ಬ ಬಲೆ ಬೀಸಿದಾಗ ಬಲೆಗೆ ಸಿಲುಕಿಕೊಂಡ ಮೀನಿನ ಹೊಟ್ಟೆಯೊಳಗೆ ಏನೋ ಇದೆ ಎಂಬುದು ಗೊತ್ತಾಗಿದೆ. ಕೂಡಲೇ, ಅದರ ಹೊಟ್ಟೆ ಭಾಗವನ್ನ ಕತ್ತರಿಸಿ ನೋಡಿದಾಗ, ಅಚ್ಚರಿಯೊಂದು ಕಾದಿತ್ತು. ಮೀನನ ಹೊಟ್ಟೆಯೊಳಗೆ ವಿಸ್ಕಿ ಬಾಟಲಿಯೊಂದು ದೊರೆತಿದೆ. ಮೀನುಗಾರ ಈ ಒಂದು ವಿಡಿಯೋವನ್ನ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದು ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ. ಆದ್ರೆ, ಈ ಮೀನಿನ ಹೊಟ್ಟೆಯೊಳಗೆ ಇಷ್ಟು ದೊಡ್ಡ ಓಪನ್ ಸಹ ಮಾಡದ ವಿಸ್ಕಿ ಬಾಟಲಿ ಹೇಗೆ ಹೋಯಿತು ಎಂಬುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

About The Author