www.karnatakatv.net : ಉತ್ತರ ಪ್ರದೇಶ ಜನಸಂಖ್ಯೆ ಮಸೂದೆಯ ಕರಡಿನ ಭಾಗವಾಗಿದೆ. ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಕೇಸರಿ ಸಂಘಟನೆಗಳ ಆಕ್ಷೇಪಣೆಯ ನಂತರ ಉತ್ತರ ಪ್ರದೇಶ ಸರ್ಕಾರ ಹೊಸ ಜನಸಂಖ್ಯಾ ಮಸೂದೆಯ ಕರಡಿನಲ್ಲಿ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಮೂಲಗಳ ಪ್ರಕಾರ, ಒಂದು ಮಗುವನ್ನು ಹೊಂದಿರುವ ದಂಪತಿಗಳಿಗೆ ನೀಡುವ ಪ್ರೋತ್ಸಾಹ ಧನಗಳನ್ನು ರದ್ದುಗೊಳಿಸಲು ಸರ್ಕಾರ ಯೋಜಿಸಿದೆ. ಇದು ಪ್ರಸ್ತುತ 2021 ರ ಯುಪಿ ಬಿಜೆಪಿ ಶಾಸಕರಲ್ಲಿ ಶೇ.50 ಮಂದಿಗೆ 3ಕ್ಕಿಂತ ಅಧಿಕ ಮಕ್ಕಳು.. ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳನ್ನು ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅನರ್ಹರನ್ನಾಗಿ ಮಾಡಲು ಮತ್ತು ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ಈ ಮಸೂದೆಯು ಅವಕಾಶ ನೀಡುತ್ತದೆ.
ಆದರೆ ಈ ಮಸೂದೆ ಪ್ರಕಾರ ಇಬ್ಬರು ಮಕ್ಕಳನ್ನು ಹೊಂದಿರುವವರು ಎರಡು ಹೆಚ್ಚುವರಿ ಸಂಬಳ ಏರಿಕೆ ಹಾಗೂ ಮನೆ ಖರೀದಿಸಲು ಸಹಾಯಧನ ಮತ್ತು ಯುಟಿಲಿಟಿ ಬಿಲ್‌ಗಳಲ್ಲಿ ರಿಯಾಯಿತಿ ಪಡೆಯಲಿದ್ದಾರೆ. ಹಾಗೆಯೇ ಒಂದು ಮಗು ಹೊಂದಿರುವ ದಂಪತಿಗಳು ನಾಲ್ಕು ಹೆಚ್ಚುವರಿ ಸಂಬಳ ಏರಿಕೆ ಪಡೆಯಲಿದ್ದಾರೆ. ಹಾಗೆಯೇ ಮಗು ಪದವಿವರೆಗೆ ಉಚಿತ ಶಿಕ್ಷಣ ಮತ್ತು ಶಾಲೆಗಳಲ್ಲಿ ಪ್ರವೇಶಕ್ಕೆ ಆದ್ಯತೆ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲಿದೆ ಎಂದು ಈ ಮಸೂದೆ ಹೇಳುತ್ತದೆ.