ನಿರ್ದೇಶನ, ನಟನೆ, ಸಂಭಾಷಣೆ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಈಗ ಗಾಯಕರಾಗೂ ಜನಪ್ರಿಯತೆ ಗಳಿಸಿದ್ದಾರೆ. ಇನ್ನು ಉಪೇಂದ್ರ ಅವರುಸತೀಶ್ ರಾಜ್ ಮೂವಿ ಮೇಕರ್ಸ್ ಲಾಂಛನದಲ್ಲಿ, ಸತೀಶ್ ರಾಜ್ ಕಥೆ, ಚಿತ್ರಕಥೆ ,ಸಾಹಿತ್ಯ , ಸಂಭಾಷಣೆ ರಚಿಸಿ , ನಿರ್ಮಿಸಿ, ನಿರ್ದೇಶಿಸಿರುವ “ಹುಷಾರ್” ಚಿತ್ರದ “ನೀ ನೋಡೋಕ್ಕೆ ಸಿಕ್ಸ್ಟೀನು ಸ್ವೀಟಿ” ಎಂಬ ಹಾಡನ್ನು ಹಾಡಿದ್ದಾರೆ. ಉಪೇಂದ್ರ ಹಾಗೂ ಜಾಹ್ನವಿ ಆನಂದ್ ಹಾಡಿರುವ ಈ ಹಾಡಿಗೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ.
ಎಲ್ಲಿಗೇ ಹೋದರೂ ನನ್ನೊಂದಿಗೆ ಭಾರತವನ್ನು ಕೊಂಡೊಯ್ಯುತ್ತೇನೆ : ಗೂಗಲ್ ಸಿಇಒ ಸುಂದರ್ ಪಿಚೈ
ಇತ್ತೀಚೆಗೆ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಹಾಡು ಕೇಳಿ ಪ್ರಿಯಾಂಕ ಉಪೇಂದ್ರ ಅವರು, H20 ಚಿತ್ರದ “ದಿಲ್ ಇಲ್ದೇ ಲವ್ ಮಾಡೋಕಾಗಲ್ವೆ” ಹಾಡಿನ ಹಾಗಿದೆ ಈ ಹಾಡು ಅದೇ ರೀತಿ ಹಿಟ್ ಆಗಲಿ ಎಂದು ಹಾರೈಸಿದ್ದಾರೆ. ಸತೀಶ್ ರಾಜ್ ಅವರು ಡಾ. ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ. 1990 ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು, ಕನ್ನಡ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ರಂಗಭೂಮಿ ನಂಟು ಇದೆ. ಅಶ್ವಿನಿ ಅರುಣ್ ಕೃಷ್ಣನ್ ಅವರ ಸಹ ನಿರ್ಮಾಣವಿರುವ ಈ ಚಿತ್ರಕ್ಕೆ ಸಿದ್ದೇಶ್ ನಾಯಕನಾಗಿ ನಟಿಸಿದ್ದಾರೆ. ಆದ್ಯಪ್ರಿಯ, ರಚನ ಮಲ್ನಾಡ್, ವಿನೋದ್, ಡಿಂಗ್ರಿ ನಾಗರಾಜ್, ಗಣೇಶ್ ರಾವ್, ಸತೀಶ್ ರಾಜ್, ಪುಷ್ವ ಸ್ವಾಮಿ, ಲಯ ಕೋಕಿಲ, ಪವಿತ್ರ ಮುಂತಾದವರು ತಾರಾ ಬಳಗದಲ್ಲಿದ್ದಾರೆ