Tuesday, January 7, 2025

Latest Posts

ಜಗತ್ತಿಗೆ ಮಾದರಿಯಾಯ್ತು ಭಾರತದ ಯಶಸ್ವಿ ಯುಪಿಐ ಪಾವತಿ ಪದ್ಧತಿ…!

- Advertisement -

Technology News:

ಯುಪಿಐ ಸೇವೆಗಳು 2016ರ ಏಪ್ರಿಲ್​ನಲ್ಲಿ ಪ್ರಾರಂಭಿಸಲಾಯಿತು. ಈ ಸೇವೆಗಳ ಪರಿಚಯದೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಎಂದು ಹೇಳಬಹುದು. ಈ ಹಿಂದೆ ಯಾರೊಬ್ಬರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕೆಂದರೆ ಬ್ಯಾಂಕ್​ಗಳಿಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ ಈಗ ಹಾಗಿಲ್ಲ. ಯಾರದ್ದಾದರೂ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಕೆಲವೇ ಸೆಕೆಂಡುಗಳಲ್ಲಿ ಯುಪಿಐ ವ್ಯವಸ್ಥೆಯ ಮೂಲಕ ಹಣವನ್ನು ವರ್ಗಾಯಿಸಬಹುದು. ನಾವು ತಪ್ಪಾದ ಮೊಬೈಲ್ ಸಂಖ್ಯೆಯನ್ನು ನಮೂದಿಸದ ಹೊರತು ಯಾವುದೇ ತಪ್ಪು ಮಾಡುವ ಅವಕಾಶವಿಲ್ಲ. ಈ ಯುಪಿಐ ವ್ಯವಸ್ಥೆಯು ದೇಶದಲ್ಲಿ ಅತ್ಯಂತ ಯಶಸ್ವಿಯಾಗಿ ಚಾಲನೆಯಲ್ಲಿದೆ. ಈ ವ್ಯವಸ್ಥೆಯಿಂದ ಬ್ಯಾಂಕ್​ಗಳ ಮೇಲಿನ ಒತ್ತಡವೂ ಕಡಿಮೆಯಾಗಿದೆ.

ಯುಪಿಐ ಡಿಜಿಟಲ್ ಪಾವತಿ ಗೇಟ್‌ವೇ ವ್ಯವಸ್ಥೆಯಾಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ. ಈ ನೀತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ಪ್ರಸ್ತುತ 30ಕ್ಕೂ ಹೆಚ್ಚು ದೇಶಗಳು ಈ ವ್ಯವಸ್ಥೆಯನ್ನು ಜಾರಿಗೆ ತರುತ್ತಿವೆ. ಭಾರತ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆ ಜಗತ್ತಿನ ದೇಶಗಳಿಗೆ ಮಾದರಿಯಾಗಿದೆ. ಈ ವ್ಯವಸ್ಥೆ ಯಶಸ್ವಿಯಾಗಿರುವುದರಿಂದ ಖಾತೆ ಸಂಖ್ಯೆಗೆ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ಸೇರ್ಪಡೆಯಾಗಲಿದ್ದು, ಸರ್ಕಾರದ ಯೋಜನೆಗಳ ಲಾಭವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು ಸುಲಭವಾಗಲಿದೆ. ಪಾವತಿಯಾಗಬೇಕಾದ ಅಷ್ಟೂ ಹಣದಲ್ಲಿ ಒಂದು ರೂಪಾಯಿಯೂ ಕಡಿತವಾಗದೆ ಆಗದೆ ಫಲಾನುಭವಿಗಳಿಗೆ ಕ್ಷಣಾರ್ಧದಲ್ಲೇ ತಲುಪುತ್ತದೆ. ಮತ್ತೊಂದೆಡೆ ಯುಪಿಐ ಮೂಲಕ ದಾಖಲೆ ಮಟ್ಟದಲ್ಲಿ ನಗದು ವಹಿವಾಟು ನಡೆಯುತ್ತಿದೆ. ದೊಡ್ಡ ಸೂಪರ್‌ಮಾರ್ಕೆಟ್‌ಗಳಲ್ಲಿ ಮಾತ್ರವಲ್ಲ ಸಣ್ಣ ಚಹಾದ ಅಂಗಡಿಗಳಲ್ಲೂ ಈ ಯುಪಿಐ ಪಾವತಿ ವ್ಯವಸ್ಥೆಯನ್ನು ಕಾಣಬಹುದು.

130 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಸರ್ಕಾರದ ಯೋಜನೆಗಳ ಪ್ರಯೋಜನವು ಫಲಾನುಭವಿಯ ಖಾತೆಗೆ ತಕ್ಷಣವೇ ಜಮಾ ಆಗುತ್ತಿದೆ. ಆದರೆ 8 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಜರ್ಮನಿಯಲ್ಲಿ ಯಾವುದೇ ಯೋಜನೆಯ ಲಾಭವನ್ನು ನೇರ ಲಾಭದ ಮೂಲಕ ವರ್ಗಾಯಿಸಲು 18 ತಿಂಗಳು ತೆಗೆದುಕೊಳ್ಳುತ್ತದೆ. ದಿನಕ್ಕೆ ಒಂದು ಲಕ್ಷ ಜನರು ಮಾತ್ರ ಈ ಯೋಜನೆ ತಲುಪಲು ಸಾಧ್ಯವಾಗುತ್ತದೆ. ಫಲಾನುಭವಿಗಳ ಖಾತೆ ಸಂಖ್ಯೆ ಗುರುತಿಸಿ ಪರಿಶೀಲಿಸುವುದರಿಂದ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಆದರೆ 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಯುಪಿಐ ವ್ಯವಸ್ಥೆಯ ಮೂಲಕ ಫಲಾನುಭವಿಯ ಖಾತೆ ಸಂಖ್ಯೆಯನ್ನು ಕ್ಷಣಗಳಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ತಕ್ಷಣವೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ.

ಭಾರತದಲ್ಲಿ ಯಶಸ್ವಿಯಾದ ಈ ನೇರ ಲಾಭ ವರ್ಗಾವಣೆ ಯೋಜನೆಯನ್ನು ಹಲವು ದೇಶಗಳು ಅಳವಡಿಸಿಕೊಳ್ಳುತ್ತಿವೆ. ದೇಶ ನಗದು ರಹಿತ ವಹಿವಾಟಿನತ್ತ ಸಾಗುತ್ತಿದೆ. ಭಾರತದಿಂದ ಈ ನೀತಿಗೆ ಇತರ ದೇಶಗಳು ಒಗ್ಗಿಕೊಳ್ಳುತ್ತಿವೆ. ಡಿಜಿಟಲ್ ಇಂಡಿಯಾ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತಂದಿದೆ.

- Advertisement -

Latest Posts

Don't Miss