ಗಂಗಾವತಿ ಮೂಲದ ಅಪೂರ್ವಗೆ 191ನೇ ರ್‍ಯಾಂಕ್.

ಕೊಪ್ಪಳ: ಜಿಲ್ಲೆಯ ಗಂಗಾವತಿ ಮೂಲದ ಅಪೂರ್ವಾ ಬಾಸೂರು ಐಎಎಸ್‌ನಲ್ಲಿ 191 ನೇ ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಕೊಪ್ಪಳ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಡಾ ಶ್ರೀಕಾಂತ ಬಾಸೂರು ಪುತ್ರಿಯಾಗಿದ್ದು, 2010-11 ನೆಯ ಸಾಲಿನಲ್ಲಿ ಗಂಗಾವತಿಯಲ್ಲಿ ಎಸ್ಸೆಸ್ಸೆಲ್ಸಿ ಓದಿದ್ದಾರೆ.

UPSC ಮುಖ್ಯ ಪರೀಕ್ಷೆ ಫಲಿತಾಂಶ: ಶ್ರುತಿ ಶರ್ಮಾ ಟಾಪರ್‌, ರಾಜ್ಯದ 27 ಜನ ಆಯ್ಕೆ
ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಪಿಯುಸಿ ಬೆಂಗಳೂರಿನ‌ ಆರ್.ವಿ. ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್ ಪದವಿ ಪಡೆದಿರುವ ಅವರು ದೆಹಲಿಯಲ್ಲಿದ್ದು, ಎರಡೂವರೆ ವರ್ಷ ಐಎಎಸ್ ಕೋಚಿಂಗ್ ಪಡೆದಿದ್ದಾರೆ. ಅಪೂರ್ವ ಅವರು ಬೆಂಗಳೂರಿನಲ್ಲಿ ಕುಟುಂಬದವರೊಂದಿಗೆ ಸಂತಸ ವನ್ನು ವ್ಯೆಕ್ತಪಡಿಸಿದ್ದಾರೆ.

ಅಪೂರ್ವ ಅವರ ತಂದೆ ಡಾ.ಶ್ರೀಕಾಂತ ಬಾಸೂರು ಈಗ ಆರೋಗ್ಯ ಇಲಾಖೆ ಕೇಂದ್ರ ಕಚೇರಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳ ಈ ಸಾಧನೆಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

 

About The Author