ಮಧ್ಯಪ್ರದೇಶದ :ಸಿದು ನಗರದಲ್ಲಿ ಬಿಜೆಪಿ ನಾಯಕನ ಹೀನ ಕೃತ್ಯ ಬೆಳಕಿಗೆ ಬಂದಿದೆ.ರಸ್ತೆಯ ಪಕ್ಕದ್ಲ್ಲಿ ಮಲಗಿರುವ ವ್ಯಕ್ತಿಯ ಮೇಲೆ ಬಿಜೆಪಿ ನಾಯಕ ಪ್ರವೇಶ್ ಶುಕ್ಲ ಎನ್ನುವ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ.
ಇನ್ನು ಈ ಪ್ರವೇಶ್ ಶುಕ್ಲಾ ಎನ್ನುವ ಬಿಜೆಪಿ ನಾಯಕ ಕುಡಿದ ಅಮಲಿನಲ್ಲಿ ಈ ರೀತ ಮಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾನಸಿಕ ವಿಕಲಚೇತನ ಮೇಲೆ ಮೂತ್ರ ಮಾಡಿದ್ದು ಇವನು ಸಿದು ಜಿಲ್ಲೆಯ ಕುಬ್ರಿ ನಗರದ ಬಜಾರ್ ನಲ್ಲಿರುವ ಅಂಗಡಿಯ ಮಂದೆ ಕುಳಿತಿರುವಾಗ ಬಂದ ಪ್ರವೇಶ್ ಶುಕ್ಲಾ ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ, ಈ ಘಟನೆ ಕಳೆದ ಒಂದು ವಾರದ ಹಿಂದೆ ನಡೆದಿದೆ ಎನ್ನಲಾಗಿದೆ.
ಇನ್ನು ಈ ಘಟನೆ ಕುರಿತು ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಹಾಗೂ ಪಿಸಿಸಿ ಅಧ್ಯಕ್ಷ ಕಮಲನಾಥ್ ಸಿಂಗ್ ಇಂತಹ ಸಮಾಜ ಗಾತುಕ ಕೆಲಸ ಮಾಡುವ ವ್ಯಕ್ತಿಗಳಿಗೆ ಭೂಮಿಯ ಮೇಲೆ ಜಾಗವಿಲ್ಲ. ಕೃತ್ಯ ಎಸಗಿರುವ ವ್ಯಕ್ತಿ ಬಿಜೆಪಿ ನಾಯಕ ಎಂದು ಹೇಳಲಾಗುತ್ತಿದೆ .ಆದಿವಾಸಿಗಳ ಮೇಲಿನ ದೌರ್ಜನ್ಯದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಮತ್ತೆ ಮತ್ತೆ ಇಂತಹ ಹೀನ ಕೃತ್ಯಗಳು ಮರುಕಳಿಸುತ್ತಿರುವುದು ಇಡಿ ಸಮಾಜವೇ ತಲೆ ತಗ್ಗಿಸುವಂತೆ ಮಾಡುತ್ತಿದೆ. ಇಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.
ನಿಗಮ ಮಂಡಳಿಯ ಗಾದಿಗಾಗಿ ನಡೆಯುತ್ತಿದೆ ಬಿಗ್ ಫೈಟ್: ಟಿಕೆಟ್ ತಪ್ಪಿದವರ ಸರ್ಕಸ್..!
ಸೀಟ್ ಹಿಡಿಯಲು ವಿದ್ಯಾರ್ಥಿಗಳ ಸರ್ಕಸ್: ವಿಂಡೋ ರಾಡ್ ನಿಂದ ಕೈಗೆ ಹೊಡೆತ..!