ಹಿಂದೂ ಮಹಾಸಾಗರದಲ್ಲಿ ಭಾರತ, ಅಮೆರಿಕ ಜಂಟಿ ಸಮರಾಭ್ಯಾಸಕ್ಕೆ ಚಾಲನೆ

www.karnatakatv.net: ನವದೆಹಲಿ- ಭಾರತ ಮತ್ತು ಅಮೆರಿಕ ನೌಕಾಪಡೆಗಳು ಹಿಂದೂ ಮಹಾಸಾಗರದಲ್ಲಿ 2 ದಿನಗಳ ಜಂಟಿ ಸಮರಾಭ್ಯಾಸಕ್ಕೆ ಬುಧವಾರ ಚಾಲನೆ ಸಿಕ್ಕಿದೆ. ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ವೃದ್ದಿಸಿಕೊಳ್ಳಲು ಯತ್ನಿಸುತ್ತಿರುವ ಚೀನಾಗೆ ಸೆಡ್ಡು ಹೊಡೆಯುವ ಕಾರ್ಯತಂತ್ರದ ಭಾಗವಾಗಿ ಈ ಸಮರಾಭ್ಯಾಸವನ್ನ ಹಮ್ಮಿಕೊಳ್ಳಲಾಗಿದೆ. ಅಣ್ವಸ್ತ್ರ ಅಳವಡಿಸಿದ ಯುದ್ಧ ವಿಮಾನಗಳನ್ನು ಹೊತ್ತ ಹಡಗು ‘ಯುಎಸ್ಎಸ್ ರೊನಾಲ್ಡ್ ರೇಗನ್’ , ‘ಎಫ್-18 ಯುದ್ಧವಿಮಾನಗಳು’ ,ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಯಲ್ಲಿ ಕಾರ್ಯಾಚರಿಸಬಲ್ಲ ‘ಇ-2ಸಿ’ ಯುದ್ಧವಿಮಾನಗಳನ್ನು ಈ ತಾಲೀಮಿನಲ್ಲಿ ಅಮೆರಿಕ ನಿಯೋಜನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

About The Author