Wednesday, December 4, 2024

Latest Posts

ಹಮಾಸ್ ಉಗ್ರರಿಗೆ ವಾರ್ನ್ ಮಾಡಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್

- Advertisement -

International News: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಹಮಾಸ್ ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ. ಒತ್ತೆಯಾಳಾಗಿ ಇರಿಸಿಕೊಂಡಿರುವವರನ್ನು ಬೇಗ ರಿಲೀಸ್ ಮಾಡುವಂತೆ ತಾಕೀತು ಮಾಡಿದ್ದಾರೆ.

ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಮುಂದೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹಮಾಸ್ ಬಂಡುಕೋರರಿಗೆ ಟ್ರಂಪ್ ವಾರ್ನ್ ಮಾಡಿದ್ದಾರೆ. ಮುಂದಿನ ವರ್ಷ ಜನವರಿ 20ರ ಒಳಗಾಗಿ ಬಿಡುಗಡೆ ಮಾಡಬೇಕು ಎಂದಿದ್ದು, ಇಸ್ರೇಲ್ ಪರ ಅಮೆರಿಕಾ ಬೆಂಬಲ ನೀಡುತ್ತಿದೆ.

ಹಮಾಸ್ ವಿರುದ್ಧ ಹೋರಾಡಲು ಅಮೆರಿಕ ಇಸ್ರೇಲ್‌ಗೆ ಹಲವು ರೀತಿಯ ಸಹಾಯ ಮಾಡಿದೆ. ಯುದ್ಧೋಪಕರಣಗಳನ್ನು ನೀಡುವುದು, ಸೈನ್ಯವನ್ನು ಕಳಿಸುವುದು, ಹೀಗೆ ಅನೇಕ ರೀತಿಯ ಬೆಂಬಲ ನೀಡಿದೆ. ಇದೀಗ, ಹಮಾಸ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿರುವವರಲ್ಲಿ ಅಮೆರಿಕದವರೂ ಸೇರಿದ್ದು, ಎಲ್ಲ ಒತ್ತೆಯಾಳುಗಳನ್ನು ಜನವರಿ 20ರೊಳಗೆ ರಿಲೀಸ್ ಮಾಡಬೇಕು ಎಂದಿದ್ದಾರೆ.

2023ರ ಅಕ್ಟೋಬರ್ 7ರಂದು ಹಮಾಸ್ ಮತ್ತು ಇಸ್ರೇಲ್ ಯುದ್ಧ ಶುರುವಾಗಿದ್ದು, ಈವರೆಗೂ ಯುದ್ಧ ನಿಲ್ಲಿಸುವ ಮಾತೇ ಆಡುತ್ತಿಲ್ಲ. ಇಸ್ರೇಲ್ ಮೇಲೆ ಹಮಾಸ್ ಮೊದಲು ದಾಳಿ ಮಾಡಿದ್ದು, ನಾವು ಹಮಾಸ್ ಉಗ್ರರನ್ನು ಬುಡ ಸಮೇತ  ಕಿತ್ತು ಹಾಕಿಯೇ, ತೀರುತ್ತೇವೆ ಎಂದು ಇಸ್ರೇಲ್ ಪಣತೊಟ್ಟು ನಿಂತಿದೆ. ಈವರೆಗೂ ಪ್ಯಾಲೆಸ್ತಿನ, ಗಾಜಾ ಸೇರಿ, ಇಸ್ರೇಲ್ ಸೈನ್ಯ 44 ಸಾವಿರಕ್ಕೂ ಹೆಚ್ಚು ಜನರನ್ನು ಹೊಡೆದುರುಳಿಸಿದೆ. ಆದರೆ ಇದರಲ್ಲಿ ಬರೀ ಹಮಾಸ್ ಉಗ್ರರಲ್ಲದೇ, ಪ್ಯಾಲೆಸ್ತಿನ್- ಗಾಜಾ ನಾಗರಿಕರೂ ಇರುವುದು ಮಾತ್ರ ಬೇಸರದ ಸಂಗತಿ.

- Advertisement -

Latest Posts

Don't Miss