ಅಮೆರಿಕದಲ್ಲಿ ಮಹಿಳೆಯೊಬ್ಬಳು ತನ್ನ 13 ವರ್ಷದ ಮಗನನ್ನು ವೈದ್ಯರ ಬಳಿ ಕರೆದೊಯ್ದಾಗ ಆತನಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡು ಬಂದಿದೆ. ಹಾಗಾಗಿ ಆತನಿಂದ ಬೇರೆಯವರಿಗೆ ಸೋಂಕು ತಾಗಬಾರದೆಂದು ಮತ್ತು ಆತನನ್ನು ಅಲ್ಲಿನ ಸರ್ಕಾರದವರು ತೆಗೆದುಕೊಂಡು ಹೋಗಿ, ಐಸೋಲೇಶನ್‌ನಲ್ಲಿ ಇರಿಸಬಾರದೆಂದು ಹೇಳಿ, ಆತನನ್ನು ತನ್ನ ಕಾರ್ ಡಿಕ್ಕಿಯಲ್ಲಿ ಇರಿಸಿದ್ದಾಳೆ.
ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಈ ಮಹಿಳೆ ಶಿಕ್ಷಕಿಯಾಗಿದ್ದು, ಈ ರೀತಿ ಕೃತ್ಯ ಮಾಡಿದ್ದನ್ನ ನೆಟ್ಟಿಗರು ಖಂಡಿಸಿದ್ದಾರೆ. ಆಕೆಯ ಕಾರನ್ನ ಚೆಕ್ ಮಾಡುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅಲ್ಲಿನ ಪೊಲೀಸರಿಗೆ ಈ ಮೊದಲೇ ಈ ವಿಷಯ ತಲುಪಿತ್ತು. ಕಾರ್‌ನಲ್ಲಿ ಕೋವಿಡ್ ಪಾಸಿಟಿವ್ ಇರುವ ಬಾಲಕನನ್ನು ಕರೆದೊಯ್ಯಲಾಗುತ್ತಿದೆ ಎಂದು ಮೊದಲೇ ತಿಳಿಸಲಾಗಿತ್ತು. ಹಾಗಾಗಿ ಪ್ರತೀ ಕಾರ್ ಚೆಕ್ ಮಾಡುವಾಗ ಈ ವಿಷಯ ಗೊತ್ತಾಗಿದೆ.
ವಿಷಯ ಏನಂದ್ರೆ, ತನ್ನ ಮಗನಿಗೆ ತಗುಲಿರುವ ಸೋಂಕು ಬೇರೆಯವರಿಗೆ ತಗುಲಬಾರದು. ಮತ್ತು ಆತನನ್ನು ಹೋಮ್ ಐಸೋಲೇಶನ್‌ನಲ್ಲೇ ಇಡಬೇಕು ಅನ್ನೋದು ಆಕೆಯ ಮಾತಾಗಿತ್ತು. ಅಲ್ಲದೇ ಇನ್ನೊಂದು ವೈದ್ಯರ ಬಳಿ ಕರೆದುಕೊಂಡು ಹೋಗಿ, ಆತನಿಗೆ ಸೋಂಕಿರುವುದನ್ನು ಖಚಿತಪಡಿಸಿಕೊಳ್ಳಲು ಆ ಮಹಿಳೆ ಪ್ರಯತ್ನ ಪಡುತ್ತಿದ್ದಳೆಂದು ತಿಳಿದು ಬಂದಿದೆ.