Saturday, November 23, 2024

Latest Posts

ಬಳಸಿದ ಎಣ್ಣೆಯನ್ನು ಮತ್ತೆ ಬಳಸಿದರೆ ಜೀವಕ್ಕೆ ಅಪಾಯ…?

- Advertisement -

Health tips:

ನಾವು ಮನೆಯಲ್ಲಿ ಬಜ್ಜಿ ,ಬೋಂಡಾ ಮಾಡುವಾಗ ಸಾಮಾನ್ಯವಾಗಿ ಸ್ವಲ್ಪ ಎಣ್ಣೆ ಉಳಿದಿರುತ್ತದೆ. ಉಳಿದ ಎಣ್ಣೆಯನ್ನು ಕೆಲವರು ಇತರ ಆಹಾರ ಪದಾರ್ತಗಳನ್ನು ಮಾಡುವಾಗ ಬಳಸುತ್ತಾರೆ. ಇನ್ನಿತರು ಬಳಸಿದ ತೈಲವನ್ನು ಮತ್ತೆ ಮತ್ತೆ ಮರುಬಳಕೆ ಮಾಡುತ್ತಾರೆ. ಹೀಗೆ ಮಾಡಿದರೆ ಜೀವಕ್ಕೆ ಅಪಾಯವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಡೀಪ್ ಫ್ರೈಗೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಿದರೆ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಿಂದ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸುತ್ತಿದ್ದಾರೆ.ಉಪಯೋಗಿಸಿದ ಎಣ್ಣೆಯನ್ನು ಮತ್ತೆ ಮತ್ತೆ ಸುಮಾರು 60%ರಷ್ಟು ಅಡುಗೆಗೆ ಮರುಬಳಕೆ ಮಾಡಲಾಗುತ್ತದೆ ಎಂದು ಅಧ್ಯಯನವು ತೋರಿಸಿದೆ. ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ಕೋಲ್ಕತ್ತಾ, ಮುಂಬೈ, ದೆಹಲಿ ಮತ್ತು ಚೆನ್ನೈ ನಗರಗಳಲ್ಲಿ ಕೋಹ್ನ್ ಅಡ್ವೈಸರಿ ಗ್ರೂಪ್ ಮತ್ತು ಫಿನ್‌ಲ್ಯಾಂಡ್‌ನ ನೆಸ್ಟೆ ಸಹಯೋಗದೊಂದಿಗೆ ಈ ಪರಿಣಾಮದ ಅಧ್ಯಯನವನ್ನು ನಡೆಸಿದೆ. ಬಳಸಿದ ಎಣ್ಣೆಯನ್ನು ಮತ್ತೆ ಬಳಸುವುದರಿಂದ ಆಗುವ ದುಷ್ಪರಿಣಾಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಆಹಾರ ಸುರಕ್ಷತಾ ಪ್ರಕಾರ, ಒಮ್ಮೆ ಬಳಸಿದ ಅಡುಗೆ ಎಣ್ಣೆಯ ಮರುಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಟೋಟಲ್ ಪೋಲಾರ್ ಕಾಂಪೌಂಡ್ಸ್ (ಟಿಪಿಸಿ) ಮಟ್ಟವು 25ರಷ್ಟು ಪ್ರತಿಶತವನ್ನು ತಲುಪಿದಾಗ ಅಡುಗೆ ಎಣ್ಣೆಯನ್ನು ಬದಲಾಯಿಸಬೇಕು ಎಂದು FSSAI ಸ್ಪಷ್ಟಪಡಿಸುತ್ತದೆ. ಇಲ್ಲವಾದಲ್ಲಿ ರಕ್ತನಾಳಗಳು ಗಟ್ಟಿಯಾಗುವುದು, ಲಿವರ್ ಕಾಯಿಲೆಗಳು, ಅಧಿಕ ರಕ್ತದೊತ್ತಡ ಮತ್ತಿತರ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ ಎಂದು ಎಚ್ಚರಿಸಿದೆ.

ಬಳಸಿದ ಎಣ್ಣೆಯನ್ನು ಹೆಚ್ಚಾಗಿ ಬಳಸಿದರೆ, ಅದು ಫ್ರೀ ರಾಡಿಕಲ್ ಗಳನ್ನು ಸೃಷ್ಟಿಸುತ್ತದೆ. ಫ್ರೀ ರಾಡಿಕಲ್ ಗಳು ಅಪಾಯಕಾರಿ ರೋಗಗಳನ್ನು ಉಂಟುಮಾಡುತ್ತವೆ. ಈ ಫ್ರೀ ರಾಡಿಕಲ್ ಗಳು ಕ್ಯಾನ್ಸರ್, ಬ್ಲಾಕ್ ಅಪಧಮನಿಗಳು ಮತ್ತು ಅಪಧಮನಿಕಾಠಿಣ್ಯದಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ.ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ನಾವು ಎಣ್ಣೆಯನ್ನು ಒಮ್ಮೆ ಬಳಸಿದರೆ, ಅದರಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ನಾವು ಬಳಸಿದ್ದೇವೆ ಎಂದರ್ಥ. ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿದರೆ, ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ ಆಗಿ ಬದಲಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಒಮ್ಮೆ ಬಳಸಿದ ಎಣ್ಣೆಯಿಂದ ತಯಾರಿಸಿದ ಆಹಾರ ಉತ್ಪನ್ನಗಳ ಸೇವನೆಯು ಹೃದ್ರೋಗ, ಉದರದ ಕಾಯಿಲೆ ಮತ್ತು ಅನ್ನನಾಳದ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಒಮ್ಮೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡಿದರೆ.. ಆಹಾರ ವಿಷವಾಗುತ್ತದೆ. ಇದು ಹೊಟ್ಟೆ ಉರಿ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಇವುಗಳನ್ನು ಗಮನದಲ್ಲಿಟ್ಟುಕೊಂಡು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸದಿರುವುದು ಉತ್ತಮ.

ಉಳಿದ ಎಣ್ಣೆಯನ್ನು ಹೀಗೆ ಬಳಸಿ :
1.ವಿದ್ಯುತ್ ಹೋದಾಗ, ನೀವು ಈ ಎಣ್ಣೆಯನ್ನು ಸುರಿದು ದೀಪಗಳನ್ನು ಬೆಳಗಿಸಬಹುದು.

2.ಬಳಸಿದ ಎಣ್ಣೆಯನ್ನು ಒಂದು ಕಾಗದದ ಮೇಲೆ ಸವರಿ ಕೀಟಗಳು ಬರುವ ಕಡೆ ನೇತು ಹಾಕಿದರೆ ಕೀಟಗಳು ಆ ಕಾಗದಕ್ಕೆ ಅಂಟಿಕೊಂಡಿರುತ್ತವೆ ನಂತರ, ಕಾಗದವನ್ನು ಎಸೆಯಬಹುದು.

3.ಲೆದರ್ ಬ್ಯಾಗ್ಸ್ ಮತ್ತು ಇತರ ವಸ್ತುಗಳನ್ನು ಈ ಎಣ್ಣೆಯಿಂದ ಒರೆಸಿದರೆ ಮೃದುವಾಗುತ್ತದೆ ಹಾಗೂ ಹೊಳೆಯುತ್ತದೆ .ಈ ಎಣ್ಣೆಗೆ ಸ್ವಲ್ಪ ವಿನೆಗರ್ ಸೇರಿಸಿ ಮರದ ಪೀಠೋಪಕರಣಗಳನ್ನು ಒರೆಸಿದರೆ ಅದು ಹೊಸದಾಗಿ ಹೊಳೆಯುತ್ತದೆ.

ಕಪ್ಪು ಮೆಣಸಿನಲ್ಲಿ ಬಂಗಾರದಂತ ಆರೋಗ್ಯದ ಲಾಭಗಳು …!

ಕಿತ್ತಳೆ ಹಣ್ಣು ನಿಮ್ಮ ಚರ್ಮಕ್ಕೆ ವರದಾನವಾಗಿದೆ…!

ಕೇವಲ ಒಂದು ತಿಂಗಳಲ್ಲಿ ನಿಮ್ಮ ತೂಕ ಕಡಿಮೆ ಮಾಡಬಹುದು ….!

 

- Advertisement -

Latest Posts

Don't Miss