Health tips:
ಆಯುರ್ವೇದದ ಪ್ರಕಾರ ಮಜ್ಜಿಗೆ ಸೇವನೆ ಮಾಡುವುದರಿಂದ ಆಗುವ ಲಾಭವೇನು ಮಜ್ಜಿಗೆಯನ್ನು ಯಾರು ಸೇವನೆಮಾಡಬೇಕು, ಯಾರು ಸೇವನೆಮಾಡಬಾರದು, ಹೇಗೆ ಸೇವನೆ ಮಾಡಬೇಕು ಯಾವ ಸಮಯದಲ್ಲಿ ಸೇವನೆ ಮಾಡಬೇಕು..?ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ.
ಹಲವಾರು ಚಿಕಿತ್ಸೆಗಳಿಗೆ ಮಜ್ಜಿಗೆಯನ್ನು ಬಳಸಲಗುತ್ತದೆ .ಶರೀರದ ನರಗಳ ದೌರ್ಬಲ್ಯತೆಗೆ ,ಮೆದುಳಿನಿಂದ ಏನಾದರು ವ್ಯಾದಿಗಳು ಉಂಟಾದರೆ , ತುಂಬಾ ಸ್ಟ್ರೆಸ್ ಇದ್ರೆ ಅಂಥವರಿಗೆ ಆಯುರ್ವೇದದಲ್ಲಿ ಮಜ್ಜಿಗೆ ಯಿಂದ ಚಿಕಿತ್ಸಿ ಮಾಡುತ್ತಾರೆ, ಇದನ್ನು ತಕ್ರಧಾರ ಎಂದು ಕರೆಯುತ್ತಾರೆ, ಹೀಗೆ ಮಾಡುವುದರಿಂದ ಮಾನಸಿಕ ರೋಗಗಳು ನಿವಾರಣೆಯಾಗುತ್ತದೆ ಜೊತೆಗೆ ಮೆದಳಿನಲ್ಲಿ ತುಂಬಿರುವಂತ ಪಿತ್ತ ವಿಕರಾಗಳು ದೂರವಾಗುತ್ತದೆ ನಿಮಗೆ ಕರುಳಲ್ಲಿ ಹುಣ್ಣಾಗಿದ್ದರೆ ,ಲಿವರ್ ತೊಂದರೆ ಇದ್ರೆ ,ಕರುಳಿನ ತೊಂದ್ರೆ ಇದ್ದರೆ ,ಇಂತಹ ಸಮಸ್ಯೆ ಇರುವವರು ಮಜ್ಜಿಗೆಯನ್ನು ತೆಗೆದುಕೊಂಡರೆ ಅವರ ಸಮಸ್ಯೆಗಳು ಸಂಪೂರ್ಣವಾಗಿ ಗುಣವಾಗುತ್ತದೆ .
ಮಸಾಲೆಯುಕ್ತ ಆಹಾರ ಸೇವಿಸಿದಾಗ ಖಡ್ಡಾಯವಾಗಿ ಮಜ್ಜಿಗೆ ಕುಡಿಯಿರಿ. ಆಗ ಹೊಟ್ಟೆಯಲ್ಲಿ ಯಾವುದೇ ಕಿರಿಕಿರಿ ಇದ್ದರೂ ನಿವಾರಣೆ ಯಾಗುತ್ತದೆ. ದೇಹದ ಉಷ್ಣತೆ ಕಡಿಮೆ ಮಾಡಲು ಮಜ್ಜಿಗೆ ಪ್ರಮುಖ ಪಾತ್ರವಹಿಸುತ್ತದೆ. ಹೆಣ್ಣುಮಕ್ಕಳು ಋತುಬಂಧಕ್ಕೆ ಮುಂಚೆ ಮತ್ತು ನಂತರ ಹೆಚ್ಚು ಮಜ್ಜಿಗೆ ಕುಡಿಯಿರಿ. ಮಹಿಳೆಯರಲ್ಲಿ ಕಂಡುಬರುವ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣ.
ಅತಿಯಾದ ಉಷ್ಣಾಂಶದಿಂದ ಮಲಬದ್ದತೆ ಉಂಟಾದರೆ ,ibs ,ನರಗಳ ದೌರ್ಬಲ್ಯತೆ ,ಸಂದಿಯಲ್ಲಿ ವಾತವೃದ್ಧಿಯಾಗುವುದು ಚರ್ಮದ ವ್ಯಾದಿಗಳು ಜಾಸ್ತಿಯಾಗುತ್ತಿದೆ ಎಂದರೆ ಮಜ್ಜಿಗೆಯನ್ನು ತೆಗೆದುಕೊಂಡರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು,ಮಜ್ಜಿಗೆಯಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ ,ವಿಟಮಿನ್ ಸಿ ,ರೈಬೊ ಫ್ಲೌಮಿನ್ ಅಂಶ ಇದೆ ,ಹಲವಾರು ಸೂಕ್ಷ್ನ ಜೀವಸತ್ವಗಳು ,ಪೊಟಾಶಿಯಂ ಹೇರಳವಾಗಿದೆ ಇಂಥಹ ಎಲ್ಲ ಸೂಕ್ಷ್ಮ ಅಂಶಗಳು ಮಜ್ಜಿಗೆಯಲ್ಲಿದೆ, ಅಸಿಡಿಟಿಗೆ ಮಜ್ಜಿಗೆಯಷ್ಟು ಒಳ್ಳೆಯದು ಯಾವುದು ಇಲ್ಲ ಎನ್ನಬಹುದು. ಇದನ್ನು ನಾವು ಹಲವಾರು ಕಾಯಿಲೆಗಳಲ್ಲಿ ಪರಿಹಾರ ಮಾರ್ಗವಾಗಿ ಬಳಸಬಹುದು ,ಅಜೀರ್ಣ ಸಮಸ್ಯೆ ಇದ್ದವರು ಒಂದುಗ್ಲಾಸ್ ಮಜ್ಜಿಗೆಗೆ ಹಸಿ ಶುಂಠಿಯನ್ನು ಸೇರಿಸಿ ಕುಡಿದರೆ ,ಖಂಡಿತವಾಗಿ ಸಮಸ್ಯೆ ದೂರವಾಗುತ್ತದೆ .
ತೂಕ ಕಡಿಮೆಯಾಗ ಬಯಸುವವರು ವಾರದಲ್ಲಿ ಒಂದು ದಿನ ಮಜ್ಜಿಗೆ ಫಾಸ್ಟಿಂಗ್ ಮಾಡಿದರೆ ,ಅತಿಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದು ಬೇಗ ಫ್ಯಾಟ್ ಅನ್ನು ಕಡಿಮೆ ಮಾಡುತ್ತದೆ . ಪ್ರತಿದಿನ ಮಜ್ಜಿಗೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ . ಇಮ್ಮ್ಯೂನಿಟಿ ಪವರ್ ಅನ್ನು ಸ್ಟ್ರಾಂಗ್ ಮಾಡುತ್ತದೆ . ಚರ್ಮದ ವ್ಯಾದಿಗಳು ಬರುವುದಿಲ್ಲ .ಹಾಗೂ ಕಣ್ಣಿನ ದೃಷ್ಟಿ ಸುಧಾರಣೆ ಯಾಗುತ್ತದೆ ,ಉರಿ ಮೂತ್ರ ದೂರವಾಗುತ್ತದೆ ಮಜ್ಜಿಗೆಯನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಹಾಗೂ ಮದ್ಯಾನ ಸೇವಿಸುವುದರಿಂದ ನಿಮ್ಮ ಸಮಸ್ಯೆಬೇಗ ಕಡಿಮೆಯಾಗುತ್ತದೆ ಕಿಡ್ನ್ ಸಮಸ್ಯೆ ,ಕಫ ಇರುವವರು ತುಂಬಾ ಶೀತ ಇರುವವರು ಮಾತ್ರ ವ್ಯದ್ಯರ ಸಲಹೆ ತೆಗೆದು ಕೊಂಡು ಮಜ್ಜಿಗೆಯನ್ನು ಸೇವನೆ ಮಾಡಬೇಕು, ಇನ್ನು ಉಳಿದವರೆಲ್ಲರೂ ಸೇವನೆ ಮಾಡಬಹುದು.
ಊಟ ಮಾಡಿದ ನಂತರ ಉಬ್ಬಿದ ಹಾಗೆ, ಭಾರವಾದ ಹಾಗೆ ಅನುಭವವಾಗುತ್ತಿದ್ದರೆ ಒಂದು ಲೋಟ ಮಜ್ಜಿಗೆ ಕುಡಿಯಿರಿ. ಮಜ್ಜಿಗೆಗೆ ಶುಂಠಿ, ಜೀರಿಗೆ, ಕೊತ್ತಂಬರಿ ಮತ್ತು ಇತರ ಮಸಾಲೆಗಳನ್ನು ಸೇರಿಸಿದರೆ ಜೀರ್ಣಕ್ರಿಯೆಯನ್ನು ಸುಧಾರಿಸಿ ಸರಾಗವಾಗಲು ಸಹಾಯವಾಗುತ್ತದೆ. ದೇಹದಲ್ಲಿ ತೈಲದ ಅಂಶ ಹೆಚ್ಚು ಸೇರಿಕೊಂಡಿದ್ದರೆ ಮಜ್ಜಿಗೆ ತೈಲ ಮತ್ತು ಕೊಬ್ಬನ್ನು ತೆಗೆಯುತ್ತದೆ. ಒಂದು ಲೋಟ ಮಜ್ಜಿಗೆ ನಮ್ಮ ತ್ವಚೆ ಚಿರಯೌವ್ವನಿಗರಂತೆ ಕಾಣಲು, ಚುರುಕುಬುದ್ಧಿಯನ್ನು ಹೊಂದಲು ಸಹಾಯ ಮಾಡುತ್ತದೆ.
ಮಜ್ಜಿಗೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಸಮೃದ್ಧವಾಗಿದೆ. ಅಂತಹ ಬ್ಯಾಕ್ಟೀರಿಯಾಗಳನ್ನು ಪ್ರೋಬಯಾಟಿಕ್‌ಗಳು ಎಂದು ಕರೆಯಲಾಗುತ್ತದೆ. ಈ ಬ್ಯಾಕ್ಟೀರಿಯಾಗಳು ವ್ಯಕ್ತಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಒಟ್ಟಾರೆ ಜಠರಗರುಳಿನ ಆರೋಗ್ಯಕ್ಕೆ ಮಜ್ಜಿಗೆ ಸಹಕಾರಿ ಎಂದು ಪರಿಗಣಿಸಲಾಗಿದೆ.
ಬಿಸಿಲಿಗೆ ಹೊರಗಡೆ ಹೋಗುತ್ತಿದ್ದರೆ ಆಗ ನೀವು ಒಂದು ಬಾಟಲಿ ಮಜ್ಜಿಗೆ ಇಟ್ಟುಕೊಳ್ಳಿ ಅಥವಾ ಮನೆಗೆ ಮರಳಿದ ಕೂಡಲೇ ಒಂದು ಲೋಟ ಮಜ್ಜಿಗೆ ಕುಡಿಯಿರಿ. ನೀರು, ಮೊಸರು, ಉಪ್ಪು ಮತ್ತು ಮಸಾಲೆಗಳನ್ನು ಒಳಗೊಂಡಿರುವಂತಹ ಮಜ್ಜಿಗೆಯು ದೇಹಕ್ಕೆ ದ್ರವಾಂಶ ಮತ್ತು ವಿದ್ಯುದ್ವಿಚ್ಛೇದದ ಮಟ್ಟವನ್ನು ಹೆಚ್ಚಿಸುವುದು ಮತ್ತು ನಿರ್ಜಲೀಕರಣ ತಪ್ಪಿಸುವುದು.
ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ನಿಮ್ಮ ತ್ವಚೆ ಹೊಳೆಯುವುದು ಗ್ಯಾರೆಂಟಿ..!