Navaratri special:
ನವೆಂಬರ್ 26ರಿಂದ ನಾಡಿನಾದ್ಯಂತ ನವರಾತ್ರಿಯ ಸಂಭ್ರಮ ಸಡಗರ ನಡೆಯುತ್ತಿದೆ ,9 ದಿನಗಳು ದುರ್ಗಾ ದೇವಿಯನ್ನು 9 ವಿವಿಧ ಅವತಾರಗಳನ್ನು ಆರಾದಿಸಿ ಪೂಜಿಸುತ್ತಾರೆ, ದೇವಿಯ ಕೃಪೆಗೆ ಪಾತ್ರರಾಗಲು ಭಕ್ತರು ಈ ದಿನ ಭಕ್ತಿಯಿಂದ ಉಪವಾಸ ಆಚರಿಸಿ ಪೂಜೆಗಳನ್ನು ಮಾಡುತ್ತಾರೆ, ನವರಾತ್ರಿ ಎಂಬುವುದು ನಮ್ಮ ಮನಸ್ಸನ್ನು ನಿಯಂತ್ರಿಸುವ ಆಚರಣೆಯಾಗಿದೆ.
ಮನುಷ್ಯರಲ್ಲಿ ಸಾತ್ವಿಕ ಹಾಗೂ ತಾಮಸ ಎರಡೂ ಗುಣಗಳಿರುತ್ತವೆ, ಇವುಗಳಲ್ಲಿ ನಾವು ಯಾವುದನ್ನು ಅಳವಡಿಸಿ ಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ರೂಪವಾಗುವುದು. ನಮ್ಮಲ್ಲಿರುವ ಸಾತ್ವಿಕ ಗುಣಗಳನ್ನು ಅಳವಡಿಸಿಕೊಂಡರೆ ನಮ್ಮಲ್ಲಿ ಒಳ್ಳೆಯ ಗುಣಗಳು ಹೆಚ್ಚಾಗುತ್ತದೆ ಇದರಿಂದ ನಾವು ಪ್ರಾರ್ಥನೆಯಲ್ಲಿ ಮತ್ತಷ್ಟು ಲೀನವಾಗಬಹುದು ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.
ಧರ್ಮಗ್ರಂಥಗಳ ಪ್ರಕಾರ, ಜನರು ನವರಾತ್ರಿ ಉಪವಾಸವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಕೆಲವರು ದಿನದಲ್ಲಿ ಒಂದು ಹೊತ್ತು ಊಟ ಮಾಡುತ್ತಾರೆ .ಕೆಲವರು ನವರಾತ್ರಿಯ ಒಂಬತ್ತು ದಿನಗಳು ಹಣ್ಣು,ಮತ್ತು ಗಂಗಾಜಲವನ್ನು ಸೇವಿಸಿ ನವರಾತ್ರಿಯನ್ನು ಉಪವಾಸ ಮಾಡುತ್ತಾರೆ. ಅದು ಅವರ ಭಕ್ತಿಗೆ ಬಿಟ್ಟಿದ್ದು .ದೇವಿಯ ಬಳಿ ಸಂಕಲ್ಪ ಮಾಡಿಕೊಂಡು ಉಪವಾಸ ಮಾಡಿದರೆ ನೀವು ಬೇಡಿಕೆ ಇಟ್ಟಿರುವ ಆಸೆಯೂ ದೇವಿ ಪೂರೈಸುತ್ತಾಳೆ , ಮುಂಜಾನೆ ದೇವಿಗೆ ದೂಪ ದೀಪ ಅಲಂಕಾರಮಾಡಿ ಪೂಜೆಮಾಡಿ ಉಪವಾಸ ಪ್ರಾರಂಭಿಸಬೇಕು ,ಹಾಗು ಸಂಜೆ ದೇವಿಗೆ ಮಂಗಳಾರತಿ ಮಾಡಿ ಉಪವಾಸ ಬಿಡಬೇಕು , ಸತತವಾಗಿ ಒಂಬತ್ತು ದಿನ ಉಪವಾಸವಿರುವವರು ,ಉಪವಾಸದ ವೇಳೆ ಪಾಯಸ,ಹಣ್ಣು ಮತ್ತು ಹಣ್ಣಿನ ಜೂಸ್,ಮೊಸರು, ಎಳೆನೀರು ,ಅವಲಕ್ಕಿಯನ್ನು ಮಾತ್ರ ಸೇವಿಸಬೇಕು ,ಯಾವುದೇ ಕಾರಣಕ್ಕೂ ಉಪ್ಪು, ಖಾರ ಸೇವಿಸಬಾರದು .
ವ್ಯಜ್ಞಾನಿಕವಾಗಿ ಉಪವಾಸ ಮಾಡುವವರಿಂದ ನಮ್ಮ ಜೀರ್ಣ ಕ್ರಿಯೆ ಸುಗಮಗೊಳುತ್ತದೆ, ದೇಹದಲ್ಲಿ ಸಂಗ್ರಹವಾಗಿರುವ ಅನವಶ್ಯಕ ಕೊಬ್ಬು ಕರಗುತ್ತದೆ ಹಾಗು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಲು ಸಹಾಯ ಮಾಡುತ್ತೆ.ಉಪವಾಸ ಮಾಡಿದಾಗ ನಮ್ಮಲ್ಲಿ ಹಸಿವು ಹೆಚ್ಚುವುದು, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ , ನಮ್ಮಲ್ಲಿರುವ ಕಾಮ, ಕ್ರೋಧ, ಮದ–ಮತ್ಸರ ಈ ಎಲ್ಲಾ ಲೋಪಗಳನ್ನು ಜಯಿಸಬೇಕು ಎಂಬುವುದನ್ನು ನವರಾತ್ರಿ ಸೂಚಿಸುತ್ತದೆ. ಈ ಸಮಯದಲ್ಲಿ ಹಣ್ಣುಗಳನ್ನಷ್ಟೇ ತಿನ್ನುವುದರಿಂದ ನಮ್ಮ ದೇಹ ಶುದ್ಧವಾಗುವುದು, ಉಪವಾಸ ಮಾಡಿದಾಗ ದೇಹ ಶುದ್ಧವಾದರೆ, ಧ್ಯಾನ ಮಾಡಿದಾಗ ಮನಸ್ಸು ಶುದ್ಧವಾಗುವುದು. ದೇಹ ಹಾಗೂ ಮನಸ್ಸು ಎರಡೂ ಶುದ್ಧವಾಗಿದ್ದರೆ ಆರೋಗ್ಯ ಚೆನ್ನಾಗಿರುತದೆ . ಹಾಗಾದರೆ ನೀವು ಕೂಡ ನವರಾತ್ರಿಯ ದಿನಗಳಲ್ಲಿ ಉಪವಾಸ ಆಚರಿಸಿ ದೇವಿಯ ಕೃಪೆಗೆ ಪಾತ್ರರಾಗಿ .