Friday, November 22, 2024

Latest Posts

ಈ ರೀತಿ ಸ್ಯಾನಿಟೈಸರ್ ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ..!!

- Advertisement -

Health tips:

ಕಣ್ಣಿಗೆ ಕಾಣಿಸದ ವೈರಸ್ ನರ್ತಿಸುತ್ತಿರುವುದು ನಮಗೆ ಗೊತ್ತೇ ಇದೆ, ಈ ಗಿನ ಪರಿಸ್ಥಿತಿಯಲ್ಲಿ ವೈರಸ್ ಅಂದರೆ ತಿಳಿಯದೆ ಇರುವವರು ಯಾರು ಇಲ್ಲ ಎಂದು ಹೇಳಬಹುದು. ಆದಕಾರಣ ಸ್ಯಾನಿಟೈಸರ್ ಬಳಸುವುದು ತುಂಬಾ ಹೆಚ್ಚಾಗಿದೆ. ಈಗ ಎಲ್ಲಿ ನೋಡಿದರೂ ಸ್ಯಾನಿಟೈಸರ್‌ಗಳಿವೆ ವಿಶೇಷವಾಗಿ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ಅನೇಕ ಜನರು ಸ್ಯಾನಿಟೈಸರ್‌ಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಅತಿಯಾಗಿ ಬಳಸಿದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಹೆಚ್ಚು ಸ್ಯಾನಿಟೈಸರ್ ಬಳಸಿದರೆ ,ಕೆಟ್ಟ ಬ್ಯಾಕ್ಟೀರಿಯಾ ಜೊತೆಗೆ ಒಳ್ಳೆಯ ಬ್ಯಾಕ್ಟೀರಿಯಾಗಳೂ ನಾಶವಾಗುತ್ತವೆ. ಈ ಒಳ್ಳೆಯ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಪ್ರವೇಶಿಸದಿದ್ದರೆ, ನಾವು ಅನೇಕ ರೋಗಗಳಿಗೆ ತುತ್ತಾಗುತ್ತೇವೆ. ಅಲ್ಲದೆ ಅತಿಯಾಗಿ ಸ್ಯಾನಿಟೈಸರ್ ಬಳಸಿದರೆ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಮಹಿಳೆಯರ ಕೈಗಳು ಸೆನ್ಸಿಟಿವ್ ಆಗಿರುವುದರಿಂದ ಸ್ಯಾನಿಟೈಸರ್ ಅನ್ನು ಹೆಚ್ಚಾಗಿ ಬಳಸುವುದರಿಂದ ತ್ವಚೆಯು ಕಿರಿಕಿರಿ, ದದ್ದು, ಒಣಗುತ್ತದೆ.

ಆದ್ದರಿಂದ, ಸ್ಯಾನಿಟೈಸರ್‌ಗಳನ್ನು ಅತಿಯಾಗಿ ಬಳಸದಂತೆ ಸೂಚಿಸಲಾಗಿದೆ. ಸಾಬೂನು ಮತ್ತು ನೀರು ಲಭ್ಯವಿದ್ದರೆ, ನಿಮ್ಮ ಕೈಗಳನ್ನು ಅವುಗಳಿಂದ ತೊಳೆದುಕೊಳ್ಳಿ. ಎಂದು ವೈದ್ಯರು ಹೇಳುತ್ತಾರೆ .

ಇವುಗಳನ್ನು ಫ್ರಿಡ್ಜ್ ನಲ್ಲಿಟ್ಟರೆ ವಿಷಕ್ಕಿಂತ ಅಪಾಯಕಾರಿ..!

ಮಾರ್ಕೆಟ್ ನ ಕಂಡೀಷನರ್‌ಗಳು ಕೂದಲನ್ನು ನಾಶ ಮಾಡುತ್ತಿದೆಯೇ..? ಒಮ್ಮೆಈ ಟಿಪ್ಸ್ ಫಾಲೋ ಮಾಡಿ..

ಡಿಪ್ರೆಷನ್‌ಗೆ ಮುನ್ನೆಚ್ಚರಿಕೆ ಸಂಕೇತಗಳು ನಿಮಗೆ ಗೊತ್ತಾ..?

- Advertisement -

Latest Posts

Don't Miss