State News : ವಿಧಾನ ಸೌಧ ಕಲಾಪ ನಡೆಯುತ್ತಿದ್ದು ನಿರಂತರವಾಗಿ ಸೌಧದಲ್ಲಿ ಭದ್ರತಾ ಲೋಪ ಕಂಡುಬರುತ್ತಿದೆ. ಇತ್ತೀಚೆಗೆ ಬಜೆಟ್ ಮಂಡನೆ ವೇಳೆ ಕಲಾಪಕ್ಕೆ ಆಗಮಿಸಿದ್ದ ಅನಾಮಿಕನನ್ನು ಪತ್ತೆ ಹಚ್ಚಿ ವಿಚಾರಣೆಗೂ ಕೂಡಾ ಒಳಪಡಿಸಲಾಗಿತ್ತು. ಇದೇ ವೇಳೆ ಮತ್ತೆ ಮಹಿಳೆಯೋರ್ವಳ ಬ್ಯಾಗ್ ನಲ್ಲಿ ಚೂರಿ ಕಂಡುಬಂದಿದ್ದು ಇದರ ವಿಚಾರವಾಗಿ ಮತ್ತೆ ಕಲಾಪಕ್ಕೆ ಭದ್ರತೆಯ ಲೋಪ ಕಂಡುಬಂದಿದೆ.
ಇವೆಲ್ಲವನ್ನು ಗಮನಿಸಿದ ಸ್ಪೀಕರ್ ಇದೀಗ ಒಂದು ನಿರ್ಧಾರಕ್ಕೆ ಬಂದಿದ್ದು, ಸೌಧ ಪ್ರವೇಶಿಸುವ ಮುನ್ನ ಸಂಪೂರ್ಣವಾಗಿ ಎಲ್ಲರನ್ನು ಚೆಕ್ ಮಾಡಬೇಕ, ನನ್ನನ್ನೂ ಸೇರಿಸಿ ಎಂದು ಕರೆಕೊಟ್ಟರು. ಜೊತೆಗೆ ನೂತನವಾದ ತಂತ್ರಜ್ಞಾನದಿಂದ ಭದ್ರತೆ ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದು ಕಲಾಪದಲ್ಲಿ ವಿವರಣೆ ನೀಡಿದರು.
U.T Khadar : ಮೀನುಗಾರರ ಸಮಸ್ಯೆ ಪರಿಹಾರಕ್ಕೆ ನಾನು ಸದಾ ಸಿದ್ಧ: ಯು.ಟಿ ಖಾದರ್
K.Venkatesh : ವಾಕಿಂಗ್ ಪಾತ್ ಇದ್ದರೂ ವಾಕ್ ಮಾಡಲಾಗುತ್ತಿಲ್ಲ..?! ವಾಯುವಿಹಾರಕ್ಕೆ ಏನಿದು ತಡೆ..?!