ಉತ್ತರಾಖಂಡ್ ಪ್ರವಾಹ – ಕರ್ನಾಟಕದಲ್ಲಿ ಸೆ. 24ರವರೆಗೆ ಭಾರೀ ಮಳೆ

ಕಳೆದೆರಡು ದಿನಗಳಿಂದ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸರಣಿ ಮೇಘ ಸ್ಪೋಟ ಉಂಟಾಗಿದ್ದು, ಮೂರು ಗ್ರಾಮಗಳಲ್ಲಿ ಕನಿಷ್ಠ ಹತ್ತು ಜನರು ನಾಪತ್ತೆಯಾಗಿದ್ದಾರೆ. ಚಮೋಲಿ ಜಿಲ್ಲೆಯ ನಂದನಗರ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುವ ಪ್ರವಾಹ ಮತ್ತು ಭೂಕುಸಿತಗಳು ಹಲವಾರು ಗ್ರಾಮಗಳನ್ನು ಅವ್ಯವಸ್ಥೆಗೆ ದೂಡಿದ್ದು, ಪ್ರಮುಖ ಸಂವಹನ ಸಂಪರ್ಕ ಕಡಿತಗೊಳಿಸಿವೆ.

ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ನಂದನಗರ, ಸರಪಾನಿ ಮತ್ತು ಧರ್ಮಾ ಗ್ರಾಮಗಳಲ್ಲಿ ಹತ್ತು ಜನರಿ ಕಾಣೆಯಾಗಿದ್ದು, ಪತ್ತೆಹಚ್ಚಲು ಅಧಿಕಾರಿಗಳು ನಿರಂತರ ಹುಡುಕಾಟದಲ್ಲಿದ್ದಾರೆ. ರಾಜ್ಯ ವಿಪತ್ತು ಕಾರ್ಯಾಚರಣೆ ಕೇಂದ್ರ, ಭಾರೀ ಮಳೆಯಿಂದಾಗಿ ನಗರ ಪಂಚಾಯತ್ ನಂದಪ್ರಯಾಗದ ಕುಂಟಾರಿ ಲಗಾಫಲಿ ವಾರ್ಡ್‌ನಲ್ಲಿ ಆರು ಮನೆಗಳಿಗೆ ಹಾನಿಯಾಗಿದೆ. ಈ ಪ್ರದೇಶದಿಂದ ಏಳು ಮಂದಿ ನಾಪತ್ತೆಯಾಗಿದ್ದು ಇಬ್ಬರನ್ನು ರಕ್ಷಿಸಲಾಗಿದೆ.

ಸದ್ಯ ದೇಶದ ಹಲವೆಡೆ ವಾಯು ಚಂಡಮಾರುತವು ಪ್ರಸರಣ ಮುಂದುವರಿದಿದೆ. ಕರ್ನಾಟಕದಲ್ಲೂ ಹವಾಮಾನ ವೈಪರೀತ್ಯವು ಮುಂದುವರಿದಿದೆ. ಇದರ ಪರಿಣಾಮವಾಗಿ ವಿವಿಧ ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಮುಂದುವರಿಯಲಿದೆ. ಸೆಪ್ಟಂಬರ್ 24ರವರೆಗೆ ಅನೇಕ ರಾಜ್ಯಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author