Sunday, September 8, 2024

Latest Posts

ವಿ.ಆರ್.ಚೌಧರಿ ವಾಯುಪಡೆ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ..!

- Advertisement -

www.karnatakatv.net :ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ವಾಯುಪಡೆ ಮುಖ್ಯಸ್ಥರಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.

ನಿರ್ಗಮಿತ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಧೋರಿಯಾ ಅವರು ಚೌಧರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 1982 ರಲ್ಲಿ ವಾಯುಪಡೆ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದ ಚೌಧರಿ 3800 ಗಂಟೆಗೂ ಹೆಚ್ಚು ಅವಧಿ ಫೈಟರ್ ವಿಮಾನ ಮತ್ತು ತರಬೇತಿ ವಿಮಾನವನ್ನು ಹಾರಿಸಿದ ಅನುಭವನ್ನು ಹೊಂದಿದ್ದಾರೆ.  

ಹಲವು ಕಮಾಂಡ್ ಮತ್ತು ಸಿಬ್ಬಂದಿ ನೇಮಕಾತಿಗಳನ್ನು ನಿರ್ವಹಿಸಿದ್ದಾರೆ ಹಾಗೇ  ವಾಯುಪಡೆಯ ಉಪಮುಖ್ಯಸ್ಥರು, ಪೂರ್ವ ವಾಯುನೆಲೆಯ ಏರ್​ಸ್ಟಾಫ್ ಆಫೀಸರ್, ಏರ್​ಫೋರ್ಸ್​ ಅಕಾಡೆಮಿಯ ಕಮಾಂಡೆಂಟ್​​ ನೇಮಕಾತಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ್ದರು. ದೇಶದ ಹೆಮ್ಮೆಯ ಕ್ಷಣಗಳ ಮೆರುಗು ಹೆಚ್ಚಿಸುವ ಸೂರ್ಯಕಿರಣ್ ಏರೊಬಾಟಿಕ್ ಪ್ರದರ್ಶನ ತಂಡದ ಆರಂಭದ ದಿನಗಳಲ್ಲಿ ಅದರ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ಇವರ ಸಾಧನೆಗೆ ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಾಯು ಸೇನಾ ಮೆಡಲ್ ಗೌರವ ಸಿಕ್ಕಿದ್ದು, ಭಾರತದ ಎಲ್ಲ ಸಶಸ್ತ್ರಪಡೆಗಳ ಮಹಾದಂಡನಾಯಕರಾಗಿರುವ ರಾಷ್ಟ್ರಪತಿಗೆ ಪ್ರಸ್ತುತ ಗೌರವ ಸಲಹೆಗಾರರಾಗಿದ್ದಾರೆ.

- Advertisement -

Latest Posts

Don't Miss