www.karnatakatv.net: ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ದೇವಸ್ಥಾನಗಳನ್ನು ಮುಚ್ಚಲಾಗಿತ್ತು. ಅದೇ ರೀತಿ ತಿರುಮಲ ದೇವಾಲಯವನ್ನು ಬಂದ್ ಮಾಡಲಾಗಿತ್ತು. ಆದರೆ ಈಗ ತಿರುಪತಿ ದೇವಸ್ಥಾನಕ್ಕೆ ತೆರಳುವವರಲ್ಲಿ ಮಹತ್ವದ ಸೂಚನೆಯನ್ನು ನೀಡಲಾಗಿದೆ.
ಹೌದು, ತಿರುಪತಿಗೆ ತೆರಳುವ ಭಕ್ತಾದಿಗಳು ದೇವರ ದರ್ಶನಕ್ಕೆ ಬರುವ ಮುಂಚೆ ಕೊರೊನಾ ಲಸಿಕಾ ಪ್ರಮಾಣಪತ್ರ ಅಥವಾ ನೆಗೆಟಿವ್ ಆರ್ಟಿಪಿಸಿಆರ್ ಪರೀಕ್ಷಾ ವರದಿಯನ್ನ ಕಡ್ಡಾಯಗೋಳಿಸಲಾಗಿದೆ ಅಂತಾ ದೇವಸ್ಥಾನದ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಘೋಷಿಸಿದ್ದಾರೆ.
ಹಾಗೇ ಎರಡು ಡೋಸ್ ಕೊರೊನಾ ಲಸಿಕೆಯನ್ನ ಪಡೆದವರಿಗೆ ಮಾತ್ರ ಪವೇಶವನ್ನು ಕೊಡಲಾಗುವುದು ಇಲ್ಲವಾದರೆ 72 ಗಂಟೆ ಮುಂಚಿನ ಆರ್ಟಿಪಿಸಿಆರ್ ಪರೀಕ್ಷೆಯನ್ನು ಹೋಂದಿರಬೇಕು ಎಂದು ತಿಳಿಸಿದ್ರು. ದರ್ಶನ ಪಡೆಯುವ ನಿಗದಿತ ದಿನಕ್ಕೆ ಮೂರು ದಿನಗಳ ಮೊದಲು ಕೊರೊನಾ ಪರೀಕ್ಷೆಯನ್ನು ಮಾಡಿಸಿರಬೇಕು ಎಂದು ಅಧ್ಯಕ್ಷ ಸುಬ್ಬಾರೆಡ್ಡಿ ಅವರು ಹೇಳಿದ್ದಾರೆ. ಕೊರೊನಾ ಎರಡನೇ ಅಲೆ ಕಾಣಿಸಿಕೊಂಡ ನಂತರ ಏಪ್ರಿಲ್ ನಲ್ಲಿ ತಿಮ್ಮಪ್ಪನ ಉಚಿತ ದರ್ಶನ ಹಾಗೂ ಪೂಜೆಯನ್ನು ರದ್ದುಗೊಳಿಸಲಾಗಿತ್ತು ಆದರೆ ಶೀಘ್ರವೇ ಭಕ್ತರಿಗೆ ಉಚಿತ ದರ್ಶನ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದರು.