Monday, April 21, 2025

Latest Posts

ವಾಲೆಟ್ಟಿ ಸಿನಿಮಾದ ಟ್ರೈಲರ್ ಬಿಡುಗಡೆ…!

- Advertisement -

film News: ಮಲಯಾಳಂನಲ್ಲಿ ಬಹು ನಿರೀಕ್ಷೆ ಹುಟ್ಟುಹಾಕಿರುವ ಸಿನೆಮಾ ವಾಲಟ್ಟಿ. ಇದೊಂದು ವಿಭಿನ್ನ ಹಾಗೂ ಶ್ವಾನಗಳ ಕುರಿತಾದ ಎಮೋಷನಲ್ ಸಿನೆಮಾ ಆಗಿದ್ದು, ಈಗಾಗಲೇ ಪೋಸ್ಟರ್ ಇಂದ ಎಲ್ಲರ ಗಮನ ಸೆಳೆದಿತ್ತು.

ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದ್ದು, ಜುಲೈ 10 ರಂದು ವಾಲಟ್ಟಿ – ಎ ಟೀಲ್ ಆಫ್ ಟೇಲ್ಸ್ ಸಿನೆಮಾದ ಟ್ರೈಲರ್ ಬಿಡುಗಡೆ ಮಾಡಿದೆ.
ಸಾಕು ನಾಯಿಗಳ ಬಗ್ಗೆ ತಯಾರಾಗಿರುವ ಈ ಅದ್ಭುತ ಚಿತ್ರದಲ್ಲಿ ಹೃದಯ ಬೆಚ್ಚಗಾಗಿಸುವ ಎಲಿಮೆಂಟ್ಸ್ ತುಂಬಿವೆ. ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ, ಇದರಲ್ಲಿ ಒಟ್ಟು 9 ನಾಯಿಗಳು ಇದ್ದು, ಸತತವಾಗಿ 2 ವರ್ಷ ಆಕ್ಟಿಂಗ್ ತರಬೇತಿ ಪಡೆದಿವೆ. ನಾಯಿಗಳನ್ನು ಒಳಗೊಂಡ ಈ ಚಿತ್ರದಲ್ಲಿ ಅಮೋಘವಾದ ಸಾಹಸಮಯ ದೃಶ್ಯಗಳನ್ನೂ ನೋಡಬಹುದು.

ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು ಮೇಕಿಂಗ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ಪ್ರೇಕ್ಷಕರು ಡೈಲಾಗ್ಸ್ ಗೆ ಫಿದಾ ಆಗಿದ್ದಾರೆ. ವಾಲಟ್ಟಿ ಕನ್ನಡ ಡೈಲಾಗ್ ಡಬ್ಬಿಂಗ್ ಜವಾಬ್ದಾರಿಯನ್ನು ರತ್ನನ್ ಪ್ರಪಂಚ ಸಿನೆಮಾದ ನಿರ್ದೇಶಕ ರೋಹಿತ್ ಪಡಕ್ಕಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಈಗಾಗಲೇ ಅಂಗಾಮಲಿ ಡೈರೀಸ್ ಹಾಗೂ ಹೋಮ್ ಎಂಬ ವಿಭಿನ್ನ ಸಿನೆಮಾಗಳನ್ನು ಮಾಡಿ ಹೊಸ ರೀತಿಯ ಸಿನಿಮಾಗಳಿಗೆ ಬುನಾದಿ ಹಾಡಿದ್ದ ವಿಜಯ್ ಬಾಬುರವರು ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್ ಚಿತ್ರವನ್ನು ಮಲಯಾಳಂನಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ.
ನಿರ್ದೇಶಕ ದೇವನ್ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದಾಗಿದೆ. ‘ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್’ ಚಿತ್ರವು ಜುಲೈ 14 ರಂದು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ.

ಜುಲೈ 21 ರಂದು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಗೊಳ್ಳಲಿದ್ದು, ಈ ಸಿನಿಮಾವನ್ನು ಕನ್ನಡದ ವಿತರಣಾ ಸಂಸ್ಥೆಯಾದ ಕೆಆರ್‌ಜಿ ಸ್ಟುಡಿಯೋಸ್ ವಿಶ್ವದಾದ್ಯಂತ ಚಿತ್ರ ಬಿಡುಗಡೆಯ ಹಕ್ಕುಗಳನ್ನು ಪಡೆದುಕೊಂಡಿದೆ.

 

- Advertisement -

Latest Posts

Don't Miss