Tuesday, March 11, 2025

Latest Posts

Vande Bharath Train : ವಂದೇ ಭಾರತ್ ರೈಲಿಗೆ ಮತ್ತೆ ಕಲ್ಲೆಸೆತ…!

- Advertisement -

State News : ವಂದೇ ಭಾರತ್ ರೈಲಿಗೆ  ಮತ್ತೆ ಮತ್ತೆ ಕಲ್ಲೆಸೆತ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಲೇ ಇವೆ. ಈ ಹಿಂದೆ ಬೆಂಗಳೂರು, ಹಾಗೂ ರಾಮನಗರ ಜಿಲ್ಲೆಗಳಲ್ಲಿ ಎರಡು ಬಾರಿ ವಂದೇ ಭಾರತ್‌ ರೈಲಿಗೆ ಕಲ್ಲೆಸದ ಘಟನೆಗಳು ನಡೆದಿತ್ತು.

ಈ ಘಟನೆ ಮಾಸುತ್ತಿದೆ ಎನ್ನುವಾಗಲೇ ಈಗ ಮತ್ತೊಮ್ಮೆ ರಾಮನಗರ ಪಟ್ಟಣದ ಹೊರ ವಲಯದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಹಾಗೂ ಲಾಲ್‌ಬಾಗ್‌ ಎಕ್ಸ್‌ಪ್ರೆಸ್‌ ಎರಡೂ ರೈಲುಗಳಿಗೆ ಕಲ್ಲೆಸೆದ ಘಟನೆ ನಡೆಸಿದೆ. ಕಿಡಗೇಡಿಗಳು ಕಲ್ಲು ಎಸೆದಿದ್ದರಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೂರ್ನಾಲ್ಕು ಕಿಟಕಿ ಗಾಜುಗಳು ಪುಡಿ, ಪುಡಿ ಆಗಿವೆ.

ಕಿಡಿಗೇಡಿಗಳು ಬೀಸಿದ ಕಲ್ಲು ರೈಲಿನ ಕಿಟಕಿ ಗಾಜು ಪುಡಿ ಪುಡಿಯಾಗಿ ಸೀಟಿನ ಮೇಲೆ ಬಿದ್ದಿದೆ. ರೈಲ್ವೆ ಪ್ರಯಾಣಿಕರು ಸ್ವಲ್ಪದರಲ್ಲೇ ಕಲ್ಲಿನಿಂದ ಅಪಾಯ ಆಗುವುದು ತಪ್ಪಿದೆ. ಕಲ್ಲು ಗಾಜಿನ ಮೇಲೆ ಬಿದ್ದಾಕ್ಷಣ ಅಲ್ಲಿಂದ ಎದ್ದಿದ್ದಾರೆ. ಇನ್ನು ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.  ಘಟನೆಯ ಬೆನ್ನಲ್ಲೇ ರೈಲ್ವೆ ಪೊಲೀಸರು ಕಲ್ಲು ಹೊಡೆದ ಕಿಡಗೇಡಿಗಳ ಪತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ ಎನ್ನಲಾಗಿದೆ.

KRS Dam : ಕೆ ಆರ್ ಎಸ್ ಡ್ಯಾಂ ನಲ್ಲಿ ನೀರು ನಾಯಿಗಳ ಮೋಜಿನಾಟ…!

Arun Kumar Putthila : ಸೌಜನ್ಯ ಪ್ರಕರಣ ಮರು ತನಿಖೆಗೆ ಒಳಪಡಿಸಿ : ಅರುಣ್ ಪುತ್ತಿಲ

Sunil Kumar : “ಸಾಕು ಮಾಡಿ ಸೋಗು” : ಸರ್ಕಾರದ ವಿರುದ್ಧ ಸುನೀಲ್ ಕುಮಾರ್ ಗರಂ

- Advertisement -

Latest Posts

Don't Miss