banglore:sandalwood stories:
ದೇಶದೆಲ್ಲೆಡೆ 75ರ ಅಮೃತ ಮಹೋತ್ಸವದ ರಂಗು ಮೂಡಿದೆ . ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ತಿರಂಗ ಹಾರಾಡುತ್ತಿದೆ. ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡಾ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ತಾರೆಯರೆಲ್ಲಾ ವಿಶೇಷ ಗೀತೆಯ ಮೂಲಕ ದೇಶಕ್ಕೆ ನಮನ ಸಲ್ಲಿಸಿದ್ದಾರೆ. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿರುವ ವಂದೇ ಮಾತರಂ ಹಾಡಿಗೆ ಕನ್ನಡದ ತಾರೆಯರೆಲ್ಲರೂ ಕೈ ಜೋಡಿಸಿದ್ದಾರೆ.
ಕನ್ನಡದ ತಾರೆಯರ ಹಾಡನ್ನು ಮುಖ್ಯಮಂತ್ರಿಯವರ ಅಫೀಶ್ಯಲ್ ಟ್ವಿಟರ್ ಖಾತೆ ಮೂಲಕವೇ ಬಿಡುಗಡೆಗೊಳಿಸಲಾಗಿದೆ. ಈ ವಿಶೇಷ ಗೀತೆಯಲ್ಲಿ ರವಿಚಂದ್ರನ್,ಸುದೀಪ್,ಡಾಲಿ ಧನಂಜಯ್,ಅನಂತ್ ನಾಗ್,ಮುರಳಿ,ಗಣೇಶ್, ರಿಷಬ್ ಶೆಟ್ಟಿ ಎಲ್ಲರೂ ಕಾಣಿಸಿಕೊಂಡಿದ್ದಾರೆ.ಜೊತೆಗೆ ಸಾಲುಮರದ ತಿಮ್ಮಕ್ಕ.ಎಸ್ ಎಲ್ ಬೈರಪ್ಪ,ವೆಂಕಟೇಶ್ ಪ್ರಸಾದ್ ಎಲ್ಲರೂ ಇದ್ದು ಅನೇಕರು ಕಣ್ಮರೆಯಾಗಿದ್ದಾರೆ.
ಹೌದು ತಾರೆಯರ ಈ ವಿಶೇಷ ಗೀತೆಯಲ್ಲಿ ಎಲ್ಲರೂ ಕಾಣುತ್ತಿದ್ದು. ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಹಾಗೆಯೇ ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ್ ಕಾಣದಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸರಕಾರಕ್ಕೆ ಅಭಿಮಾನಿಗಳು ಉಳಿದ ನಟರೆಲ್ಲಿ ದೇಶಕ್ಕೆ ಕೊಡುಗೆ ನೀಡಿದವರು ಇಷ್ಟೇನಾ ಎಂಬುವುದಾಗಿ ಪ್ರಶ್ನೆ ಮಾಡಿದ್ದಾರೆ.