Friday, November 22, 2024

Latest Posts

ನಿಮ್ಮ ಮನೆಯ ವಾಸ್ತು ಟಿಪ್ಸ್ ..!

- Advertisement -

Vastu Tips:

ಮನೆಯನ್ನು ಪ್ರತಿಯೊಬ್ಬರೂ ವಾಸ್ತುಪ್ರಕರವಾಗಿಯೇ ಕಟ್ಟುಕೊಳ್ಳುತ್ತಾರೆ.ಯಾವುದೇ ಮನೆಯಾಗಲೀ ಚಿಕ್ಕ ಮನೆಯಿಂದ ಹಿಡಿದು ದೊಡ್ಡ ಮನೆಗಳಿಗೂ ವಾಸ್ತು ಸರಿಯಾಗಿರಬೇಕು ಎಂದುಕೊಳ್ಳುತ್ತಾರೆ. ವಾಸ್ತು ಶಾಸ್ತ್ರ ವಿದ್ವಾಂಸರ ಸಲಹೆಗಳ ಆಧಾರದ ಮೇಲೆ ವಾಸ್ತು ನಿಯಮಗಳನ್ನು ಅನುಸರಿಸಲಾಗುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆ ನಿರ್ಮಾಣ ಹೇಗಿರಬೇಕು. ಚಿಕ್ಕ ಮನೆಯಿಂದ ಹಿಡಿದು ದೊಡ್ಡ ಅಪಾರ್ಟ್‌ಮೆಂಟ್‌ವರೆಗೆ ವಾಸ್ತು ಸರಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ವಾಸ್ತು ವಿದ್ವಾಂಸರ ಉಲ್ಲೇಖಗಳು, ಸಲಹೆಯ ಆಧಾರದ ಮೇಲೆ ವಾಸ್ತು ನಿಯಮಗಳನ್ನು ಅನುಸರಿಸಲಾಗುತ್ತದೆ. ವಾಸ್ತು ನಿಯಮದ ಪ್ರಕಾರ ಮನೆ ನಿರ್ಮಾಣ ಹೇಗಿರಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯಲ್ಲಿರುವ ವಸ್ತುಗಳು ಕೂಡ ಹಾಗೆಯೇ ನಿರ್ದಿಷ್ಟ ದಿಕ್ಕಿನಲ್ಲಿ ಇರಬೇಕು. ಅವುಗಳ ಬಗ್ಗೆ ಜಾಗ್ರತೆ ವಹಿಸಿ.

ವಾಸ್ತು ತಜ್ಞರ ಪ್ರಕಾರ ಮನೆಯ ವಾಸ್ತು ನಮ್ಮ ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ, ಮನೆಯ ನೈಋತ್ಯ ದಿಕ್ಕಿನಲ್ಲಿ ಕೆಲವು ನಿರ್ಮಾಣಗಳಿದ್ದರೆ ತುಂಬಾ ತೊಂದರೆಯಾಗುತ್ತದೆ. ಹಾಗಾಗಿ ವಾಸ್ತು ಶಾಸ್ತ್ರದ ಆಧಾರದ ಮೇಲೆ ನೈಋತ್ಯ ದಿಕ್ಕಿನಲ್ಲಿ ಯಾವುದೇ ವಸ್ತುಗಳು ಇರಬಾರದು.

ವಾಸ್ತು ತಜ್ಞರ ಪ್ರಕಾರ ಯಾವುದೇ ಸಂದರ್ಭದಲ್ಲೂ ನೈಋತ್ಯ ದಿಕ್ಕಿನಲ್ಲಿ ಪೂಜಾ ಕೊಠಡಿಯನ್ನು ನಿರ್ಮಿಸಬಾರದು. ಹೀಗೆ ಮಾಡಿದರೆ ನಿಮಗೆ ಪೂಜೆಯ ಫಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ ಹಾಗೂ ಈ ದಿಕ್ಕಿನಲ್ಲಿ ಕುಳಿತುಕೊಂಡರೆ, ನಿಮಗೆ ಏಕಾಗ್ರತೆ ಇರುವುದಿಲ್ಲ. ಹಾಗಾಗಿ ಈ ದಿಕ್ಕಿನಲ್ಲಿ ಕುಳಿತು ಧ್ಯಾನ ಮಾಡಿದರೂ ನಿಮಗೆ ಫಲ ಸಿಗುವುದಿಲ್ಲ.

ಯಾವುದೇ ಸಂದರ್ಭದಲ್ಲೂ ಮನೆಯ ನೈಋತ್ಯ ದಿಕ್ಕಿನಲ್ಲಿ ಅಂಡರ್ ಗ್ರೌಂಡ್ ವಾಟರ್ ಟ್ಯಾಂಕ್ ಇರಬಾರದು. ಇದರಿಂದ ವಾಸ್ತು ದೋಷ ಹೆಚ್ಚಾಗುತ್ತದೆ.

ಮನೆಯ ನೈಋತ್ಯ ದಿಕ್ಕಿನಲ್ಲಿ ಶೌಚಾಲಯ ಇಲ್ಲದಂತೆ ನೋಡಿಕೊಳ್ಳಿ. ಇದು ಮನೆಯಲ್ಲಿ ಇರುವವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಮನೆಯಲ್ಲಿಯೇ ಇದ್ದು ಸದಾ ಅನಾರೋಗ್ಯದಿಂದ ಬಳಲುತ್ತಿರುವವರ ಆರ್ಥಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಮಕ್ಕಳ ಅಧ್ಯಯನ ಕೊಠಡಿಯನ್ನು ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬಾರದು. ಈ ದಿಕ್ಕಿನಲ್ಲಿ ನಿರ್ಮಿಸಿದರೆ ಅವರು ಓದಲು ಕುಳಿತು ಕೊಂಡರು ಸಹ ಅವರು ಏಕಾಗ್ರತೆಯಿಂದ ಓದಲು ಹಾಗುವುದಿಲ್ಲ ಎಷ್ಟು ಓದಿದರೂ ಫಲಿತಾಂಶ ಶೂನ್ಯ.

ನೈಋತ್ಯ ಮೂಲೆಯಲ್ಲಿ ಅತಿಥಿ ಕೋಣೆಯನ್ನು ನಿರ್ಮಿಸಬೇಡಿ. ಈ ದಿಕ್ಕಿನಲ್ಲಿ ವಾಸಿಸುವ ಜನರು ಪ್ರಕ್ಷುಬ್ಧರಾಗುತ್ತಾರೆ ಮತ್ತು ಅವರ ನಡವಳಿಕೆಯು ಇದ್ದಕ್ಕಿದ್ದಂತೆ ಬದಲಾಗುತ್ತದೆ.

ಮಹಿಳೆಯರು ಪುರುಷರ ಯಾವ ಸ್ವಭಾವಗಳನ್ನು ಗಮನಿಸುತ್ತಾರೆ ಗೊತ್ತಾ ..?

ಮಂಗಳವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ ..!

ಭಗವದ್ಗೀತೆಯ 18 ಅಧ್ಯಾಯಗಳು..!

- Advertisement -

Latest Posts

Don't Miss