ಕಿರುತೆರೆಯ ಜನಪ್ರಿಯ ನಟ ವಿಜಯ್ ಸೂರ್ಯ ಈಗಾಗ್ಲೇ ಕೆಲ ಸಿನಿಮಾಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.. ಅವರ ನಟನೆಯ ಮುಂದಿನ ಸಿನಿಮಾ ವೀರಪುತ್ರ.. ಬಿಗ್ ಸ್ಕ್ರೀನ್ ನಲ್ಲಿ ಲವರ್ ಬಾಯ್ ಲುಕ್ ನಲ್ಲಿ ಮಿಂಚಿ ಪ್ರೇಕ್ಷಕರ ಮನಸ್ಸು ಗೆದ್ದ ವಿಜಯ್ ಸೂರ್ಯ ಅವರು ಈ ಬಾರಿ ಪವರ್ ಫುಲ್ ಟೈಟಲ್ ನ ವೀರಪುತ್ರ ಅನ್ನುವ ಸಿನಿಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.. ನಟ ವಿಜಯ್ ಸೂರ್ಯ ಅವರ ಹುಟ್ಟು ಹಬ್ಬದ ವಿಶೇಷತೆಯಲ್ಲಿ ಚಿತ್ರತಂಡ ಸದ್ಯ ಈ ಚಿತ್ರದ ಪ್ರೋಮೋವನ್ನ ರಿಲೀಸ್ ಮಾಡಿದೆ..
ಅಂದಹಾಗೆ ಗುಲ್ಬರ್ಗದಲ್ಲಿ ನಡೆದಿರುವ ಒಂದು ನೈಜ ಘಟನೆಯನ್ನಾಧರಿಸಿ ಈ ಚಿತ್ರವನ್ನ ಮಾಡಲಾಗಿದ್ಯಂತೆ.. ಈಗಾಗ್ಲೇ ಸಪ್ಲಿಮೆಂಟ್ರಿ ಅನ್ನುವ ಸಿನಿಮಾ ಮಾಡಿದ್ದ ನಿರ್ದೇಶಕ ಆರ್.ದೇವರಾಜ್ ಅವರು ಈ ಚಿತ್ರಕ್ಕೆ ಆಕ್ಷನ್ ಕಚ್ ಹೇಳ್ತಿದ್ದಾರೆ.. ಇದು ಅವರ ನಿರ್ಗೇಶನದ ಎರಡನೇ ಸಿನಿಮಾ.. 25 ವರ್ಷಗಳ ಹಿಂದೆ ನಡೆದಿರುವ ಘಟನೆಯ ಎಳೆಯನ್ನಟ್ಕೊಂಡು ಸಿನಿಮಾ ಮಾಡ್ತಿದ್ದಾರೆ ನಿರ್ದೇಶಕರು.. ಆಯುರ್ವೇದಿಕ್ ಹಾಗೂ ಹಲೋಪತಿ ಈ ಎರಡೂ ವೈದ್ಯಕೀಯ ಪದ್ದತಿಗಳ ವ್ಯತ್ಯಾಸವನ್ನ ಈ ಚಿತ್ರದಲ್ಲಿ ಒತ್ತಿ ಹೇಳಲಾಗಿದ್ಯಂತೆ..
ಇದು ಪಕ್ಕಾ ಕಮರ್ಷಿಯಲ್ ಸಬ್ಜೆಕ್ಟ್ ಸಿನಿಮಾ.. ಇಲ್ಲಿ ನಾಯಕನದ್ದು ಸಮಾಜದಲ್ಲಿರುವ ತಪ್ಪುಗಳನ್ನ ಮೆಟ್ಟಿ ನಿಲ್ಲುವಂತಹ ವ್ಯಕ್ತಿತ್ವದ ಪಾತ್ರವಂತೆ.. ಚಿತ್ರದಲ್ಲಿ ನಾಯಕ ವಿಜಯ್ ಸೂರ್ಯ ಅವರು ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ತಿದ್ದಾರೆ.. ಸದ್ಯ ರಿವೀಲ್ ಆಗಿರುವ ಪ್ರೋಮೋದಲ್ಲಿ ವಿಜಯ್ ಸೂರ್ಯ ಅವರ ಪಾತ್ರದ ಎರಡು ಶೇಡ್ ಗಳನ್ನ ನೋಡ್ಬಹುದು..
ಇನ್ನೂ ಸಪ್ಲಿಮೆಂಟರಿ ಚಿತ್ರವನ್ನ ನಿರ್ಮಾಣ ಮಾಡಿದ್ದ ನಿಪ್ಮಾಪಕ ಗುರು ಬಂಡಿ ಅವರೇ ವೀರಪುತ್ರ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ.. ಅವರು ಧೀರ ಸಾಮ್ರಾಟ್ ಅನ್ನುವ ಚಿತ್ರವನ್ನೂ ಕೂಡ ನಿರ್ಮಿಸಿದ್ದು, ಆ ಚಿತ್ರ ಶೂಟಿಂಗ್ ಮುಗಿಸಿ ಇನ್ನೇನು ರಿಲೀಸ್ ಗೆ ರೆಡಿಯಾಗಿದೆ.. ವೀರಪುತ್ರ ಗುರು ಬಂಡಿ ಅವರ ನಿರ್ಮಾಣದ ಮೂರನೇ ಸಿನಿಮಾ.. ವೀರಪುತ್ರ ಚಿತ್ರಕ್ಕೆ ರಾಘವ್ ಸುಭಾಷ್ ಸಂಗೀತ ಸಂಯೋಜನೆ ಮಾಡ್ತಿದ್ರೆ, ಹಿರಿಯ ನಟ ಸುಂದರ್ ಕೃಷ್ಣ ಅರಸ್ ಅವರ ಮಗ ನಾಗೇಂದ್ರ ಅರಸ್ ಈ ಚಿತ್ರಕ್ಕೆ ಎಡಿಟಿಂಗ್ ವರ್ಕ್ ಮಾಡ್ತಿದ್ದಾರೆ.. ಜೊತೆಗೆ ಉದಯ್ ಆದಿತ್ಯ ಈ ಸಿನಿಮಾಗೆ ಛಾಯಾಗ್ರಾಹಕರಾಗಿದ್ದಾರೆ.. ಸದ್ಯ ರಿಲೀಸ್ ಆಗಿರುವ ಪ್ರೋಮೋ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.. ಇದೀಗ ಪ್ರೋಮೋ ರಿವೀಲ್ ಮಾಡಿರುವ ಚಿತ್ರತಂಡ ಚಿತ್ರದ ನಾಯಕಿ ಹಾಗೂ ಇತರ ಕಲಾವಿದರ ಹುಡುಕಾಟದಲ್ಲಿದೆ.. ಅತೀ ಶೀಘ್ರದಲ್ಲೇ ಚಿತ್ರೀಕರಣವನ್ನೂ ಆರಂಭಿಸಲು ಪ್ಲಾನ್ ಮಾಡಿಕೊಳ್ತಿದೆ.. ಮುಂದಿನ ವರ್ಷ ವಿಜಯ್ ಸೂರ್ಯ ನಟನೆಯ ವೀರಪುತ್ರ ಸಿನಿಮಾ ತೆರೆ ಕಾಣಲಿದೆ..
ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ




