Friday, September 20, 2024

Latest Posts

Hubballi ; ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ : ಧಾರವಾಡ ಜಿಲ್ಲೆಯಿಂದ ಗೌರಿ, ಅಸುಂಡಿ ಜಯಭೇರಿ

- Advertisement -

ಹುಬ್ಬಳ್ಳಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿಗೆ ದಿ.25ರಂದು ನಡೆದ ಚುನಾವಣೆಯಲ್ಲಿ 27 ಜನ ಅತಿ ಹೆಚ್ಚು ಮತ ಪಡೆದವರು ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದು ಧಾರವಾಡ ಜಿಲ್ಲೆಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌರಿ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಮಾಜಿ ಉಪಾಧ್ಯಕ್ಷ ಮೋಹನ ಅಸುಂಡಿ ಆಯ್ಕೆಯಾಗಿದ್ದಾರೆ.

ಒಟ್ಟೂ 57ಜನ ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಹೆಚ್ಚು ಮತ ಪಡೆದ 27 ಜನರ ಆಯ್ಕೆಯನ್ನು ರಾಜ್ಯ ಘಟಕದ ಚುನಾವಣಾಧಿಕಾರಿ ಸಿ.ಎಸ್.ವಿರೇಶ ಘೋಷಿಸಿದ್ದಾರೆ.ಇದೇ ಮೊದಲ ಬಾರಿಗೆ ಸಮಾಜದ ಚುನಾವಣೆಗೆ ಇಳಿದಿದ್ದ ನಾಗರಾಜ ಗೌರಿ 11,165 ಮತಗಳನ್ನು ಪಡೆದಿದ್ದರೆ, ಮೋಹನ ಅಸುಂಡಿ 10,911 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ.ಅಲ್ಲದೇ ರೋಣ ಶಾಸಕ ಜಿ.ಎಸ್.ಪಾಟೀಲರ ಪುತ್ರ ಸಂಗನಗೌಡ ಪಾಟೀಲ ಸಹ12061 ಮತ ಪಡೆದು ಆಯ್ಕೆಯಾಗಿದ್ದಾರೆ.ಒಟ್ಟು31,145 ಮತದಾರರ ಪೈಕಿ 18,016 ಜನ ಮತದಾರರು ಮತ ಚಲಾಯಿಸಿದ್ದು ಧಾರವಾಡ ಜಿಲ್ಲೆಯಲ್ಲಿ ಶೇ.38, ಗದಗ ಜಿಲ್ಲೆಯಲ್ಲಿ ಶೇ.54 ಮತದಾನವಾಗಿತ್ತು.

 

ನಾಗರಾಜ್ ಗೌರಿ :ಎರಡೂವರೆ ದಶಕಗಳಿಂದ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿರುವ ನಾಗರಾಜ ಗೌರಿ ಅವರು ಪ್ರಸಕ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಜತೆಗೆ ರಾಣಿ ಚೆನ್ನಮ್ಮ ಬ್ಲಾಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 2005ರಲ್ಲಿ ಎನ್ ಎಸ್ ಯು ಐ ಉಪಾಧ್ಯಕ್ಷರಾಗಿ ಸಂಘಟನೆಗೆ ಬಲಗಾಲಿಟ್ಟ ನಾಗರಾಜ ಗೌರಿ ತದನಂತರ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾಗಿ, ತದನಂತರ ಧಾರವಾಡ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು2016ರಿಂದ 2021ರವರೆಗೆ ಕೆಪಿಸಿಸಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೋವಿಡ್ ಕಾಲ ಘಟ್ಟದಲ್ಲಿ ನಾಗರಾಜ ಹಾಗೂ ಅವರ ಪತ್ನಿ ದೀಪಾ ಗೌರಿ ಮಾಡಿದ ಸಾಮಾಜಿಕ ಕಾರ್ಯಗಳಿಂದ ಸಾವಿರಾರು ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದವು. ಯಾವುದೇ ಪ್ರಚಾರದ ಹಂಗಿಲ್ಲದೇ ಆಹಾರಧಾನ್ಯಗಳ ಕಿಟ್, ತರಕಾರಿಗಳ ಕಿಟ್ ಮುಂತಾದವುಗಳನ್ನು ವಿತರಿಸಿದ್ದಾರಲ್ಲದೇ ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿಗಳು ಸಹಿತ ಹಲವರಿಗೆ ನೆರವಿನ ಹಸ್ತ ನೀಡಿದ್ದರು. ಯಾವುದೇ ಕೆಲಸವಿರಲಿ ಅದನ್ನು ನಿಷ್ಟೆಯಿಂದ ಮಾಡುವ ಇವರು ಇತ್ತೀಚೆಗೆ ಸ್ಥಳೀಯ ಜನತೆಯೊಂದಿಗೆ ಹೇಸಿಗೆ ಮಡ್ಡಿ ಹೋರಾಟ ಸಮಿತಿ ರಚಿಸಿ ನಾಲ್ಕು ದಿನಗಳ ಕಾಲ ಪ್ರತಿಭಟನೆ ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದನ್ನು ಸ್ಮರಿಸಬಹುದು.

ಮೋಹನ್ ಅಸುಂಡಿ: ಬಿಡ್ನಾಳದ ಪ್ರತಿಷ್ಠಿತ ಅಸುಂಡಿ ಕುಟುಂಬದ ಕುಡಿ ಮೋಹನ ಅಸುಂಡಿಯವರು ಸಹ ಮಾಜಿ ಮಹಾನಗರಪಾಲಿಕೆ ಸದಸ್ಯರಾಗಿ( 2001-2007) ರಚನಾತ್ಮಕ ಕೆಲಸ ಮಾಡಿದವರಾಗಿದ್ದು ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು , ಧಾರವಾಡ ಜಿಲ್ಲಾ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರಲ್ಲದೇ ಕೆಪಿಸಿಸಿ ಮಾಜಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ರೈತ ಸಂಘಟನೆಗಳಲ್ಲಿಯೂ ಸಕ್ರೀಯರಾಗಿದ್ದು ಹುಬ್ಬಳ್ಳಿ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸಕ್ತ ಇವರ ಪತ್ನ ಸಹ ಮಹಾನಗರ ಪಾಲಿಕೆ ಸದಸ್ಯರಾಗಿದ್ದಾರೆ.

ತಮ್ಮ ಆಯ್ಕೆಗೆ ಕಾರಣರಾದ ಸಮಾಜದ ಎಲ್ಲ ಹಿರಿಯ ಮುಖಂಡರಿಗೂ, ಮಾರ್ಗದರ್ಶಕರಿಗೆ ಅಲ್ಲದೇ ಮತ ಚಲಾಯಿಸಿದ ರಾಜ್ಯದ ಸಮಸ್ತ ಮತದಾರರಿಗೆ ಗೌರಿ ಮತ್ತು ಅಸುಂಡಿ ಇಬ್ಬರೂ ಕೃತಜ್ಞತೆ ಸಲ್ಲಿಸಿದ್ದಾರೆ.

- Advertisement -

Latest Posts

Don't Miss