Friday, November 22, 2024

Latest Posts

ಗ್ರಾಹಕರ ಕೈ ಸುಡುತ್ತಿದೆ ತರಕಾರಿ ಬೆಲೆ..!

- Advertisement -

www.karnatakatv.net : ಇತ್ತೆಚ್ಚೆಗೆ ಇಂಧನ ಬೆಲೆ ಏರಿಕೆಯ ಮಧ್ಯ ಈಗ ತರಕಾರಿ ಬೆಲೆಯಲ್ಲೂ ಏರಿಕೆ ಕಂಡಿದೆ.

ಇಂಧನ ಬೆಲೆಯ ಜೊತೆ ಜೊತೆಗೆ ತರಕಾರಿ ಬೆಲೆಯಲ್ಲೂ ಏರಿಕೆ ಕಂಡಿದ್ದು ಜನರಲ್ಲಿ ಗಾಯದ ಮೇಲೆ ಬರೆ ಏಳೆದಂತಾಗಿದೆ. ಪ್ರತಿ ನಿತ್ಯ ಆಗುತ್ತಿರುವ ಬೆಲೆ ಏರಿಕೆಯಲ್ಲಿ ಜನರು ಸರ್ಕಾರಕ್ಕೆ ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ದಸರಾ ಹಬ್ಬದಂದAದು ಏರಿಕೆಯಾಗಿದ್ದ ತರಕಾರಿ ಬೆಲೆ ಇನ್ನೂ ಏರಿಕೆಯಲ್ಲಿಯೇ ಇದೇ ಮುಂಬರುವ ದೀಪಾವಳಿಯಲ್ಲಿಯೂ ಕೂಡಾ ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಇಂಧನ ಬೆಲೆ ಏರಿಕೆಇಂದ ಬೆಸತ್ತ ಜನರಲ್ಲಿ ಈಗ ತರಕಾರಿ ಬೆಲೆಯು ಏರಿಕೆಯಾಗಿರುವದು ಆತಂಕ ಮೂಡಿಸಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತರಕಾರಿ ಬೆಲೆಯು ಗಗನಕ್ಕೆ ಏರಿದೆ.

ಅಕಾಲಿಕ ಮಳೆಯಿಂದ ಬೇಸಗೆ ಬೆಳೆ ಹಾನಿಯಾಗಿದ್ದರಿಂದಾಗಿ ಈರುಳ್ಳಿ, ಆಲೂಗೆಡ್ಡೆ, ಟೊಮೆಟೊ ಬೆಲೆ ಹೆಚ್ಚಳ ಕಂಡಿದೆ. ಹಲವು ರಾಜ್ಯಗಳಲ್ಲಿ ಕಳೆದ 2 ವಾರಗಳಿಂದ ತರಕಾರಿ ಬೆಲೆ ಏರುತ್ತಲೇ ಇದೆ. ಉತ್ತರಪ್ರದೇಶದಲ್ಲಿ 60 ರೂ.ಗಳಿಗೆ ಮಾರಾಟವಾಗುತ್ತಿದ್ದ ಒಂದು ಕೆ.ಜಿ ಟೊಮೆಟೊ ಬೆಲೆ 15 ರೂ. ಹೆಚ್ಚಳ ಕಂಡಿದೆ. ಈರುಳ್ಳಿ ಬೆಲೆ 20 ರೂ. ಹೆಚ್ಚಳ ಕಂಡಿದೆ.

- Advertisement -

Latest Posts

Don't Miss