Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜೋಶಿ, ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ತನ್ನ ಹೈಕಮಾಂಡ್ ಬೆಂಬಲದಿಂದ ಭಯಂಕರ ಭ್ರಷ್ಟಾಚಾರ ಶುರು ಮಾಡಿದೆ. ರಾಹುಲ್ ಗಾಂಧಿಯವರ ಬೆಂಬಲದಿಂದ ಬಹುದೊಡ್ಡ ಭ್ರಷ್ಟಾಚಾರ ನಡೆಸಿದೆ. ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ಕೋಟಿ ಕೋಟಿ ಹಣ ಸಂಗ್ರಹ ಮಾಡಿದ್ದರು. ಈ ಬಗ್ಗೆ ನಾನು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೆ. ಇಂದು ವಾಲ್ಮೀಕಿ ಅಭವೃದ್ದಿ ನಿಗಮದ ಭ್ರಷ್ಟಾಚಾರದಲ್ಲಿ ನೂರಾರು ಜನರಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದು ಸಂಪೂರ್ಣವಾಗಿ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರಗೆ ಗೊತ್ತಿದ್ದೇ ನಡೆದಿರೋ ಭ್ರಷ್ಟಾಚಾರ. ಇದು 100 % ಭ್ರಷ್ಟಾಚಾರ ಸರ್ಕಾರ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಕೋಟಿಗಟ್ಟಲೇ ಹಣ ಗೋಣಿ ಚೀಲದಲ್ಲಿ ತುಂಬಿಟ್ಟಿದ್ದಾರೆ. 40 ದಿನಗಳಾದ್ರೂ ಸಹ ನಾಗೇಂದ್ರಗೆ ಯಾವುದೇ ನೋಟೀಸ್ ನೀಡಿಲ್ಲ. ಈಗ ಈಡಿ ಅಧಿಕಾರಿಗಳು ನಾಗೇಂದ್ರನನ್ನ ಬಂಧನ ಮಾಡಿದ ಕೂಡಲೇ ದದ್ದಲ್ ತನ್ನನ್ನೂ ಬಂಧನ ಮಾಡುವಂತೆ ದುಂಬಾಲು ಬಿದ್ದಿದ್ದಾರೆ. ಈಡಿ ಅಧಿಕಾರಿಗಳಿಂದ ಬಂಧನವಾದ ಕೂಡಲೇ ನಾಟಕವಾಡುತ್ತಿದ್ದಾರೆ. ಸಿದ್ಧರಾಮಯ್ಯ ಸರ್ಕಾರ ಪರಮ ಭ್ರಷ್ಟ ಸರ್ಕಾರ. ಮುಡಾ ಹಗರಣದಲ್ಲಿ ಸಿದ್ಧರಾಮಯ್ಯ ಅವರದ್ದೇ ನೇರ ಕೈವಾಡವಿದೆ. ಬಹಳ ವ್ಯವಸ್ಥಿತವಾಗಿ ಮುಡಾ ದಲ್ಲಿ ಬಹುಬೆಲೆ ಬಾಳುವ ನಿವೇಶನ ಗುಳುಂ ಮಾಡಿದ್ದಾರೆ. ಬರೋಬ್ಬರಿ 14 ನಿವೇಶನಗಳನ್ನ ಗುಳುಂ ಮಾಡಿದ್ದಾರೆ. ಸಿದ್ಧರಾಮಯ್ಯ ಒಬ್ಬ ಕರುಡ ಭ್ರಷ್ಟ ಮುಖ್ಯಮಂತ್ರಿ. ಕೂಡಲೇ ಸಿದ್ಧರಾಮಯ್ಯ ವಿರುದ್ಧ ಸೂಕ್ತ ತನಿಖೆಯಾಗಬೇಕು. ಸಿದ್ಧರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೋಶಿ, ರಾಜ್ಯ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮುಡ ಹಗರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿರುವ ಜೋಶಿ, ಬಿಜೆಪಿಯವರಿದ್ದರೆ ಅವರ ಮೇಲೂ ಕ್ರಮವಾಗಲಿ. ಮುಡಾ ಹಗರಣದಲ್ಲಿ ನೇರವಾಗಿ ಸಿದ್ದರಾಮಯ್ಯ ಇದಾರೆ. ಸಿದ್ದರಾಮಯ್ಯನವರು ನನ್ನ ಪ್ರಶ್ನೆಗೆ ಉತ್ತರ ಕೊಡಬೇಕು. ವಿಜಯನಗರದಲ್ಲಿ ನಿಮಗೆ ಸೈಟ್ ಯಾಕೆ ಕೊಟ್ರು..? 2013 ರ ಚುನಾವಣೆ ಅಫಿಡವಿಟ್ ನಲ್ಲಿ ಸಿದ್ದರಾಮಯ್ಯ ಮಾಹಿತಿ ಕೊಟ್ಟಿಲ್ಲ. ಮುಡಾ ಹಗರಣದಲ್ಲಿ ಇದು 200 ಪರ್ಸೆಂಟ್ ಭ್ರಷ್ಟ ಸರ್ಕಾರ. ತಮ್ಮ ಪ್ರಭಾವ ಬಳಸಿ 14 ಸೈಟ್ ಹೊಡೆದಿದ್ದಾರೆ. ಬಿಜೆಪಿಯವರು ಕೊಟ್ರು ಅಂತೀರಿ. ನೀವು ಬೇಡಾ ಅನಬೇಕಿತ್ತು. ಅಕಸ್ಮಾತ್ ಬಿಜೆಪಿಯವರು ಕೊಟ್ಟಿದ್ರೆ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಇದರಲ್ಲಿ ವ್ಯವಸ್ಥಿತವಾಗಿ ಸೈಟ್ ಹೊಡೆದಿದ್ದಾರೆ. ನೀವು ಏನೂ ಮಾಡಿಲ್ಲ ಅಂದ್ರೆ ಸಿಬಿಐ ತನಿಖೆಗೆ ಕೊಡಿ. ಪ್ರತಿಭಟನೆ ಮಾಡೋಕೆ ಹೋದ್ರೆ ಅರೆಸ್ಟ್ ಮಾಡ್ತಾರೆ. ಸಂವಿಧಾನ ಹತ್ಯೆ ಮಾಡೋ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ. ಯಾವುದೇ ಹಣಕಾಸಿನ ಪ್ಲ್ಯಾನ್ ಇಲ್ಲದೇ ಯೋಜನೆ ರೂಪಿಸಿದ್ದಾರೆ. ರಸ್ತೆ ಸೇರಿ ಅಭಿವೃದ್ಧಿಗೆ ಹಣ ಇಲ್ಲ ಅಂತ ರಾಯರೆಡ್ಡಿ ಅವರೇ ಹೇಳಿದ್ದಾರೆ. ಅಹಿಂದ ಅಹಿಂದ ಅಂದುಕೊಂಡು SC – ST ಹಣ ಗ್ಯಾರಂಟಿಗೆ ಉಪಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ಕಡುಭ್ರಷ್ಟ ಅಪ್ರಾಮಾಣಿಕ ಮುಖ್ಯಮಂತ್ರಿ. ಮೋದಿ ಮತ್ತು ಜೋಶಿ ರಾಜೀನಾಮೆ ಕೊಡಬೇಕು. ಇಂತಹ ಚಿಲ್ಲರೆ, ಅಸಂಬದ್ಧ ಹೇಳಿಕೆಗೆ ಉತ್ತರ ಕೊಡಲ್ಲ ಮೋದಿ ಏನ್ ಸೈಟ್ ತಗೊಂಡಿದಾರಾ..? ಇದು ದಪ್ಪ ಚರ್ಮದ ಸರ್ಕಾರ ಎಂದು ಸಂತೋಷ್ ಲಾಡ್, ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.