- Advertisement -
Chithradurga news: ವಿಹೆಚ್‌ಪಿ ಕರ್ನಾಟಕ ರಾಜ್ಯ ಸಹ ಕಾರ್ಯದರ್ಶಿ, ಮಂಗಳೂರು ನಿವಾಸಿ ಶರಣ್ ಪಂಪ್‌ವೆಲ್ ಚಿತ್ರದುರ್ಗಕ್ಕೆ ಬರುವುದನ್ನು ನಿಷೇಧಿಸಲಾಗಿದೆ. ಇಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಸೆ.22ರಂದು ಶರಣ್ ಪಂಪ್‌ವೆಲ್ ಅವರ ದಿಕ್ಸೂಚಿ ಭಾಷಣ ನಿಗದಿಯಾಗಿತ್ತು.
ಆದರೆ ರಾಾಜ್ಯದ ಹಲವು ಭಾಗಗಳಲ್ಲಿ ಶರಣ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಕಾರಣಕ್ಕಾಗಿ ಶರಣ್ ಚಿತ್ರದುರ್ಗಕ್ಕೆ ಬರಬಾರದು ಎಂದು ಜಿಲ್ಲಾಡಳಿತ, ಆದೇಶ ಹೊರಡಿಸಿದೆ. ಸೆ.28ರಂದು ಶೋಭಾ ಯಾತ್ರೆ ಇದ್ದು, ಈ ವೇಳೆ ಗಲಭೆಯಾಗಬಾಾರದು ಎಂಬ ಕಾರಣಕ್ಕೆ, ಮುನ್ನೆಚ್ಚರಿಕೆಯಾಗಿ., ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ ಎಂದು ಹೇಳಲಾಾಗಿದೆ.
- Advertisement -