ಉಪರಾಷ್ಟ್ರಪತಿ ಚುನಾವಣೆ ಈಗ ರಂಗೇರಿದೆ. ಇಂಡಿಯಾ ಮೈತ್ರಿಕೂಟದಿಂದ, ಉಪರಾಷ್ಟ್ರಪತಿ ಚುನಾವಣೆಗೆ, ಅಭ್ಯರ್ಥಿಯನ್ನು ಫೈನಲ್ ಮಾಡಲಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ಅವರನ್ನು, ಅಭ್ಯರ್ಥಿಯಾಗಿ ಘೋಷಿಸಿದೆ. ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಬಿ. ಸುದರ್ಶನ್ ರೆಡ್ಡಿ, ಹೈದರಾಬಾದ್‌ನ ಹಿರಿಯ ವಕೀಲ. ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಅಕುಲಾ ಮೈಲಾರಂ ಗ್ರಾಮದಲ್ಲಿ, ರೈತಾಪಿ ಕುಟುಂಬದಲ್ಲಿ ಹುಟ್ಟಿದ್ರು. 1971ರಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಬಳಿಕ ಆಂಧ್ರಪ್ರದೇಶದ ಬಾರ್ ಕೌನ್ಸಿಲ್‌ನಲ್ಲಿ ವಕೀಲ ವೃತ್ತಿ ಜೀವನ ಆರಂಭಿಸಿದ್ರು. 1988ರಿಂದ 1990ರವರೆಗೆ ಹೈಕೋರ್ಟ್ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಇದೇ ವೇಳೆ ತಾವು ಓದಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ರು.
1993ರಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ಸುದರ್ಶನ್ ರೆಡ್ಡಿ ಅವರ, ಜರ್ನಿ ಆರಂಭವಾಯ್ತು. ಇದೇ ಸಮಯದಲ್ಲಿ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗ್ತಾರೆ. 2005ರಲ್ಲಿ ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಲಾಗುತ್ತೆ. ನಂತರ 2007ರಿಂದ 2011ರವರೆಗೆ ಸುಪ್ರೀಂ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ಬಳಿಕ 2013ರಲ್ಲಿ ಗೋವಾದ ಮೊದಲ ಲೋಕಾಯುಕ್ತರಾಗಿ ನೇಮಕಗೊಂಡಿದ್ರು.
ಸುದರ್ಶನ್ ರೆಡ್ಡಿ ಅವರದ್ದು ಸ್ವಚ್ಛ ಇಮೇಜ್. ನ್ಯಾಯಾಂಗದ ಅನುಭವ ಹೊಂದಿದ್ದಾರೆ. ಸದ್ಯ, ಇವರನ್ನು ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಹುದ್ದೆಯ ಅಭ್ಯರ್ಥಿಯನ್ನಾಗಿ, ಇಂಡಿಯಾ ಮೈತ್ರಿಕೂಟ ಆಯ್ಕೆ ಮಾಡಿದೆ. ತಮಿಳುನಾಡಿನ ಹಿರಿಯ ರಾಜಕಾರಣಿ, NDA ಅಭ್ಯರ್ಥಿ ವಿರುದ್ಧ ಸಿ.ಪಿ. ರಾಧಾಕೃಷ್ಣನ್ ವಿರುದ್ಧ ಕಣಕ್ಕಿಳಿಸಲಾಗಿದೆ.