Sunday, December 29, 2024

Latest Posts

ಮಾಜಿ ಸಿಎಂ ಮೇಲೆ ಅಸಮಧಾನ ವ್ಯಕ್ತಪಡಿಸಿದ ರೈತರ ಸಂಘದ ಉಪಾಧ್ಯಕ್ಷ

- Advertisement -

www.karnatakatv.net : ಗುಂಡ್ಲುಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಪಧಾದಿಕಾರಿಗಳು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು…

ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ

ಯಡಿಯೂರಪ್ಪ ಅವರ ರಾಜೀನಾಮೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಬೊಮ್ಮಲಾಪುರ ರವಿ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿರುವುದನ್ನು ನಾವು ವಿರೋದಿಸುವುದಿಲ್ಲ ಆದರೆ ಇವರ ತಾರತಮ್ಯ ನೀತಿಯನ್ನ ಖಂಡಿಸುತ್ತೇವೆ ಎಂದರು..

ಚಾಮರಾಜನಗರ ಶಾಪಗ್ರಸ್ತ ಜಿಲ್ಲೆ ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತೆ ಎಂಬ ಮೂಢನಂಭಿಕೆ ಒಳಗಾಗಿ ಆಕ್ಸಿಜನ್  ದುರಂತದಿಂದ 24 ಮಂದಿ ಮೃತಪಟ್ಟ ಸಂಧರ್ಭದಲ್ಲಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲು ಬಾರದ ಯಡಿಯೂರಪ್ಪ ಅವರು ಈಗ ಪಕ್ಷದ ಕಾರ್ಯಕರ್ತ ಸಾವನ್ನಪಿರುವುದರಿಂದ ಭೇಟಿ ನೀಡಿರುವುದು ಇವರ ತಾರತಮ್ಯ ನೀತಿಯನ್ನು ತೋರಿಸುತ್ತಿದೆ ಇವರ ಉದ್ದೇಶ ಏನಿದೆ ಎಂಬುದನ್ನು ಅವರೇ ತಿಳಿಸಿಬೇಕಿದೆ ಎಂದರು..

ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಯಡಿಯೂರಪ್ಪ ಅವರು ಮೃತ ರವಿ ಅವರ ಮನೆಗೆ ಲಕ್ಷಾಂತರ ರೂ ಪರಿಹಾರ ನೀಡಿರುವುದು ಸರಿ ಆದರೆ ಆಕ್ಸಿಜನ್  ದುರಂತದಿಂದ ಸಾವನ್ನಪ್ಪಿದವರ ಕುಟುಂಬಸ್ತರನ್ನು ಭೇಟಿ ಮಾಡಿ ಸಾಂತ್ವಾನ ಹೇಳಲು ಸಹ ಬರಲಿಲ್ಲ ,ಒಟ್ಟಾರೆಯಾಗಿ ಯಡಿಯೂರಪ್ಪ ಅವರು ಸಾವಿನಲ್ಲೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ, ಈ ರೀತಿಯಾದ ತಾರತಮ್ಯವನ್ನು ಕರ್ನಾಟಕ ರಾಜ್ಯ ರೈತ ಸಂಘ ಖಂಡಿಸುತ್ತದೆ ಈ ರೀತಿಯಾಗಿ ಭೇದ ಬಾವ ಮಾಡದೆ ಏಕರೂಪ ನೀತಿಯಿಂದ ನಡೆದುಕೊಳ್ಳಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಅಸಮಧಾನ ವ್ಯಕ್ತಪಡಿಸಿದರು.

- Advertisement -

Latest Posts

Don't Miss