ಕಾರ್ಯಕ್ರಮ ನಡೆಯುತ್ತಿದ್ದ ವೇಳೆ, ಸ್ಟೇಜ್ ಮೇಲೆ ಬಂದು ವಯಸ್ಸಾದ ರೈತನೋರ್ವ ಬಿಜೆಪಿ ಎಂಎಲ್ಎ ಪಂಕಜ್ ಗುಪ್ತಾಗೆ ಕಪಾಳ ಮೋಕ್ಷ ಮಾಡಿದ್ದಾರೆ. ಆಗ ಎಂಎಲ್‌ಎ ಸಹಚರರು ಬಂದು ಆ ರೈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಾದ ಬಳಿಕ ಹೇಳಿಕೆ ನೀಡಿದ ರೈತ, ನಾನು ಪ್ರೀತಿಯಿಂದ ಕೆನ್ನೆ ಸವರಲು ಹೋಗಿದ್ದೆ, ಆದ್ರೆ ಅಪಪ್ಪಿ ತಪ್ಪಿ ಅದು ಜೋರಾಗಿ ಕಪಾಳಕ್ಕೆ ತಾಗಿಬಿಟ್ಟಿತು ಎಂದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಸಮಾಜವಾದಿ ಪಾರ್ಟಿ ಈ ಬಗ್ಗೆ ಟ್ವೀಟ್ ಮಾಡಿ, ವೀಡಿಯೋ ಹರಿಬಿಟ್ಟಿದೆ.
ಇದಾದ ಬಳಿಕ ರೈತನೊಂದಿಗೆ ಕುಳಿತು ಪ್ರೆಸ್ ಮೀಟ್ ಮಾಡಿರುವ ಪಂಕಜ್ ಗುಪ್ತಾ. ಇವರು ನನ್ನ ಚಿಕ್ಕಪ್ಪ, ಇವರು ಮೊದಲಿನಿಂದಲೂ ಹೀಗೆ.. ಮೊದಲೆಲ್ಲ ಹೀಗೆ ತಮಾಷೆಗೆ ಕಪಾಳಕ್ಕೆ ಹೊಡೆಯುತ್ತಿದ್ದರು. ಆದ್ರೆ ಅದು ಈಗ ನಿಮಗೆಲ್ಲ ಗೊತ್ತಾಗಿ. ಈ ವೀಡಿಯೋ ವೈರಲ್ ಆಗಿದ್ದು, ಜನ ತಮಗಿಷ್ಟ ಬಂದ ಹಾಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ನಾನು ಪ್ರೆಸ್ ಮೀಟ್ ಮಾಡಬೇಕಾಯ್ತು ಎಂದು ಹೇಳಿದ್ದಾರೆ. ಅಲ್ಲದೇ ವಿರೋಧ ಪಕ್ಷದವರು ಈ ವೀಡಿಯೋ ಬಗ್ಗೆ ಬೇರೆ ಬೇರೆ ಕಥೆ ಕಟ್ಟಿ, ವೀಡಿಯೋ ವೈರಲ್ ಮಾಡುವ ಪ್ರಯತ್ನ ಪಟ್ಟಿದ್ದಾರೆಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿರುವ ರೈತ ಚತ್ರಪಾಲ್, ಇವರು ರಿಲ್ಯಾಕ್ಸ್ ಆಗಿ ಕುಳಿತಿದ್ದರು. ಹಾಗಾಗಿ ನಾನು ತಮಾಷೆಗೆ ಪ್ರೀತಿಯಿಂದ ತಟ್ಟಿದೆ ಅಷ್ಟೇ ಎಂದಿದ್ದಾರೆ.
ಇನ್ನು ಇದನ್ನೇ ಅವಕಾಶವಾಗಿ ಬಳಸಿಕೊಂಡ ಸಮಾಜವಾದಿ ಪಾರ್ಟಿ, ಈ ವೀಡಿಯೋವನ್ನ ತಮ್ಮ ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದು. ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆಯೇ ರೈತನೋರ್ವ, ಬಿಜೆಪಿ ಶಾಸಕನಾದ ಪಂಕಜ್ ಗುಪ್ತಾಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಕಪಾಳ ಮೋಕ್ಷ ಬರೀ ಪಂಕಜ್ ಗುಪ್ತಾಗಲ್ಲ. ಬದಲಾಗಿ ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರ ಮತ್ತು ಆತ ನಡೆಸುತ್ತಿರುವ ಕುನೀತಿ, ಕುಶಾಸನ ಮತ್ತು ಸರ್ವಾಧಿಕಾರದ ವಿರುದ್ಧ ನೀಡಿದ ಕಪಾಳ ಮೋಕ್ಷವಾಗಿದೆ ಎಂದು ಬರೆದುಕೊಂಡಿದ್ದಾರೆ.