Monday, December 23, 2024

Latest Posts

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಬಂಧನ

- Advertisement -

ನವದೆಹಲಿ: ಐಸಿಐಸಿಐ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಆಕೆಯ ಪತಿ ದೀಪಕ್ ಕೊಚ್ಚಾರ್ ಅವರನ್ನು ಸಿಬಿಐ ಬಂಧಿಸಿದೆ. ಮಾರ್ಚ್ 2018 ರಲ್ಲಿ, ಚಂದಾ ಕೊಚ್ಚರ್ ಅವರು ತಮ್ಮ ಪತಿಗೆ ಆರ್ಥಿಕ ಪ್ರಯೋಜನಗಳನ್ನು ಒದಗಿಸಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಚಂದಾ ಕೊಚ್ಚರ್ ಅವರು 26 ಆಗಸ್ಟ್ 2009 ರಂದು ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್‌ಗೆ ರೂ 300 ಕೋಟಿ ಮತ್ತು 31 ಅಕ್ಟೋಬರ್ 2011 ರಂದು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ರೂ 750 ಕೋಟಿಗಳನ್ನು ಅನುಮೋದಿಸಿದ ಸಮಿತಿಯ ಭಾಗವಾಗಿದ್ದರು. ಸಮಿತಿಯ ಈ ನಿರ್ಧಾರವು ಬ್ಯಾಂಕಿನ ನಿಯಂತ್ರಣ ಮತ್ತು ನೀತಿಯನ್ನು ಉಲ್ಲಂಘಿಸಿದೆ.

ಪುರುಷರು ಗುರುವಾರ ಈ ಕೆಲಸಗಳನ್ನು ಮಾಡಬಾರದು..!

ಮೇ 2020 ರಲ್ಲಿ, ಜಾರಿ ನಿರ್ದೇಶನಾಲಯ (ED) ಚಂದಾ ಕೊಚ್ಚರ್ ಮತ್ತು ಅವರ ಪತಿಯನ್ನು ಕೋಟ್ಯಂತರ ರೂಪಾಯಿಗಳ ಸಾಲ ಮತ್ತು ಅದಕ್ಕೆ ಸಂಬಂಧಿಸಿದ ಇತರ ವಿಷಯಗಳಲ್ಲಿ ಪ್ರಶ್ನಿಸಿತು. ಈ ಸಾಲವನ್ನು ಐಸಿಐಸಿಐ ಬ್ಯಾಂಕ್ 2009 ಮತ್ತು 2011ರಲ್ಲಿ ವಿಡಿಯೋಕಾನ್‌ಗೆ ನೀಡಿತ್ತು. ಆಗ ಚಂದಾ ಕೊಚ್ಚರ್ ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿದ್ದರು. ಈ ಸಂಬಂಧ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಇದಾದ ಬಳಿಕ ಇಡಿ ಚಂದಾ ಕೊಚ್ಚಾರ್ ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಬಂಧಿಸಿತ್ತು.

ಅತ್ಯಂತ ಶಕ್ತಿಶಾಲಿ ಮಂತ್ರ ಪಠಿಸಿದರೆ ಎಲ್ಲಾ ಕಷ್ಟಗಳು ಕಳೆಯುತ್ತದೆ..!

ಜಾತಕದಲ್ಲಿ ಗ್ರಹದೋಷವಿದೆಯೇ.. ಮದುವೆ ತಡವಾಗುತ್ತದೆಯೇ.. ಪರಿಹಾರಗಳೇನು ಎಂಬುದನ್ನು ತಿಳಿದುಕೊಳ್ಳೋಣ..!

- Advertisement -

Latest Posts

Don't Miss