- Advertisement -
Banglore News : ವಿಧಾನಸೌಧದ ಒಂದು ದ್ವಾರದ ಬಳಿ ಇಂದು ಬೆಳಗ್ಗೆ 6:45ರ ಸುಮಾರಿಗೆ ಡ್ರೋನ್ ಹಾರಾಟಕ್ಕೆ ಯತ್ನಿಸಿದ್ದ ಇಬ್ಬರು ಯುವಕರ ವಿರುದ್ಧ ಅತಿಕ್ರಮ ಪ್ರವೇಶ, ನಿರ್ಲಕ್ಷ್ಯ ಹಿನ್ನೆಲೆ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅರುಣ್ ಮತ್ತು ವಿನೋದ್ ವಶಕ್ಕೆ ಪಡೆಯಲಾಗಿದ್ದ ಯುವಕರು. ಸದ್ಯ ಇಬ್ಬರಿಗೂ ಸ್ಟೇಷನ್ ಬೇಲ್ ನೀಡಿ ಕಳುಹಿಸಲಾಗಿದೆ.ಡ್ರೋನ್ ಹಾರಿಸುವುದು ನಿರ್ಬಂಧಿಸಿರುವ ವಿಚಾರ ತಿಳಿಯದೆ ಹಾರಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ವಿಚಾರಣೆಯಲ್ಲಿ ಇದು ತಿಳಿದುಬಂದಿದೆ. ಖಾಸಗಿ ಕಂಪನಿಯೊಂದರ 15 ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆ ವಿಧಾನಸೌಧದ ವಿಡಿಯೋ ಚಿತ್ರೀಕರಣಕ್ಕೆ ಬಂದಿದ್ದರು ಎನ್ನಲಾಗಿದೆ.
Arun Kumar Putthila : ಪುತ್ತಿಲ ಪರಿವಾರದ ವಿರುದ್ದ ಕೇಸ್ ದಾಖಲು..?!
- Advertisement -