Political news: ಬಿಜೆಪಿ ಶಾಸಕರು ಹತಾಶೆಯಿಂದ ದಲಿತ ಸ್ಪೀಕರ್ ಮೇಲೆ ಗೂಂಡಾ ವರ್ತನೆ ತೋರಿದ್ದಾರೆ. ಅವರು ಪ್ರತಿಭಟನೆ ಮಾಡಲಿ, ನಮ್ಮ ತಪ್ಪು ಕಂಡುಹಿಡಿದು ಪ್ರಶ್ನಿಸಲಿ. ದೆಹಲಿ ನಾಯಕರು ತಮ್ಮ ಫೋಟೋ ನೋಡಲಿ, ಎಂದು ಅವರಲ್ಲೇ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ನಾಯಕರು ಮಹಾಭಾರತದ ನಾಟಕ ತೋರಿಸುತ್ತಿದ್ದು, ತೋರಿಸಲಿ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ನಾವು ನಮ್ಮ ಕೆಲಸ ಮಾಡುತ್ತೇವೆ.
ಬಿಜೆಪಿ ಹೋರಾಟಕ್ಕೆ ಕುಮಾರಸ್ವಾಮಿ ಅವರ ಬೆಂಬಲದ ಬಗ್ಗೆ ಕೇಳಿದಾಗ, ‘ಯಾರಾದರೂ ಬೆಂಬಲ ನೀಡಲಿ. ಅವರಿಗೆ ಬೆಂಬಲ ನೀಡುವ ಅವರ ಜೊತೆ ಸೇರುವ ಹಕ್ಕಿದೆ. ಅವರ ಆಂತರಿಕ ವಿಚಾರಕ್ಕೆ ನಾವ್ಯಾಕೆ ಹಸ್ತಕ್ಷೇಪ ಮಾಡೋಣ. ಅಸ್ತಿತ್ವದ ವಿಚಾರ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಅವರು ಅವರ ನಿಲುವು ತಿಳಿಸಲಿ. ಕುಮಾರಸ್ವಾಮಿ ಅವರ ನಿಲುವು ಅನೇಕ ಬಾರಿ ಅನೇಕ ರೀತಿಯಲ್ಲಿ ಬದಲಾಗಿದೆ. ಹೀಗಾಗಿ ರಾಷ್ಟ್ರೀಯ ಅಧ್ಯಕ್ಷಕಾದ ದೇವೇಗೌಡರು ಆ ಪಕ್ಷದ ನಿಲುವನ್ನು ಹೇಳಲಿ’ ಎಂದು ತಿಳಿಸಿದರು.
ವಿರೋಧ ಪಕ್ಷಗಳ ಮೈತ್ರಿ ಸರ್ಕಾರಕ್ಕೆ ಸವಾಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, ‘ಈಗ ಆ ಬಗ್ಗೆ ಚರ್ಚೆ ಬೇಡ. ರಾಜ್ಯ ಮಟ್ಟದಲ್ಲಿ ಅವರ ನಿಲುವು ಸ್ವಲ್ಪ ಸ್ವಲ್ಪ ಗೊತ್ತಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಅವರ ನಿರ್ಧಾರ ಅಂತಿಮವಾಗಿಲ್ಲ. ಈ ವಿಚಾರವಾಗಿ ಸಿಎಂ ಇಬ್ರಾಹಿಂ ಈವರೆಗೂ ಮಾತನಾಡಿಲ್ಲ. ದೇವೇಗೌಡರು ಮಾತನಾಡಿಲ್ಲ. ಕೇವಲ ಶಾಸಕಾಂಗ ಪಕ್ಷದ ನಾಯಕರು ಮಾತ್ರ ನಿಲುವು ವ್ಯಕ್ತಪಡಿಸಿದ್ದು, ರಾಜ್ಯಾಧ್ಯಕ್ಷರಾಗಲಿ, ರಾಷ್ಟ್ರೀಯ ಅಧ್ಯಕ್ಷರಾಗಲಿ ಈ ಬಗ್ಗೆ ಸ್ಪಷ್ಟನೆ ನೀಡಲಿ’ ಎಂದು ತಿಳಿಸಿದರು.
ಸ್ಪೀಕರ್ ಬದಲಾವಣೆಗೆ ಸಹಿ ಹಾಕಿರುವ ಬಗ್ಗೆ ಕೇಳಿದಾಗ, ‘ಅವರಿಗೆ ಯಶಸ್ಸಾಗಲಿ’ ಎಂದು ತಿಳಿಸಿದರು
Bengalore university: ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ ಬೆಳ್ತಂಗಡಿ ಮೂಲದ ಶೇಕ್ ಲತೀಫ್ ನೇಮಕ
Railway station: ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್: ಶ್ವಾನದಳದಿಂದ ತಪಾಸಣೆ…!