Saturday, April 19, 2025

Latest Posts

‘ಸಖತ್’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ ಅವರ ಪುತ್ರ ವಿಹಾನ್ ನಟನೆ

- Advertisement -

www.karnatakatv.net : ‘ಸಖತ್’  ಚಿತ್ರದಲ್ಲಿ ಬಾಲನಟನಾಗಿ ಗೋಲ್ಡನ್ ಸ್ಟಾರ್ ಗಣೇಶ ಅವರ ಪುತ್ರ ವಿಹಾನ್ ನಟಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರ ಗಣೇಶ್ ಅವರ ಬಾಲ್ಯದ ದಿನಗಳನ್ನು ನೆನಪಿಸುವ ದೃಶ್ಯದಲ್ಲಿ  ಗಣೇಶ್ ಅವರ ಪುತ್ರ ನಟಿಸಿರುವುದು ತುಂಬಾ ವಿಶೇಷ ವಾಗಿದ್ದು ಈ ಚಿತ್ರದಲ್ಲಿ ಗಣೇಶ ಅವರು ಕಣ್ಣು ಕಾಣದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಗಣೇಶ ಅವರ ಮಗ ವಿಹಾನ್ ನಟನೆಯನ್ನು ನೋಡಿ ನನ್ನ ಮಗ ನಿರ್ದೇಶಕರು ಹೇಳುವ ಮಾತನ್ನು ತಾಳ್ಮೆಯಿಂದ ಕೇಳುತ್ತಿದ್ದು ಮುಗ್ಧಮನಸನ್ನು ನೋಡಿ ತುಂಬಾ ಕುಷಿಯಾಗುತ್ತಿದೆ ಎಂದು ಹೇಳಿದರು. ಒಳ್ಳೆಯ ಕತೆ  ಮತ್ತು ಉತ್ತಮವಾದ ಪಾತ್ರದೊಂದಿಗೆ ನನ್ನ ಮಗ ವಿಹಾನ್ ಪ್ರೇಕ್ಷಕರ ಮುಂದೆ ಬರುತ್ತಿರುವುದನ್ನು ನೋಡಿ ನನಗೆ ಹೆಮ್ಮೆ ಆಗುತ್ತಿದೆ ಎಂದು ಗಣೇಶ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ತಂದೆಯ ಜೋತೆ ಬಣ್ಣದ ಲೋಕಕ್ಕೆ ಕಾಲಿಡುತ್ತಿರುವು ವಿಶೇಷ ವಾಗಿದೆ.

- Advertisement -

Latest Posts

Don't Miss