Sunday, December 22, 2024

Latest Posts

ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು

- Advertisement -

ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು?
ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಯಿತು ಚಿತ್ರದ ‘ವಾರಹ ರೂಪಂ..’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ‘ನಮ್ಮ ಟ್ಯೂನ್ ಕದಿಯಾಗಿದೆ’ ಎಂದು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್​​’ನವರು ಆರೋಪ ಮಾಡಿದ್ದರು. ವರಾಹ ರೂಪಂ..’ ಹಾಡಿನಲ್ಲಿ ಬಳಕೆ ಆದ ಟ್ಯೂನ್ ‘ನವರಸಂ’ ಹಾಡಿನದ್ದು ಎನ್ನುವ ಆರೋಪ ಕೇಳಿ ಬಂತು.

ಈ ವಿಚಾರ ಕೋರ್ಟ್​ನಲ್ಲಿದೆ.ಕೇರಳ ಹೈಕೋರ್ಟ್​​ನ ನ್ಯಾಯಮೂರ್ತಿ ಎ. ಬದ್ರುದೀನ್ ಅವರು ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ.

ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್​ನಿಂದ ಮಧ್ಯಂತರ ಅಥವಾ ಅಂತಿಮ ಆದೇಶ ಬರೋವರೆಗೆ ಕಾಂತಾರ ಸಿನಿಮಾದಲ್ಲಿ ‘ವರಾಹ ರೂಪಂ..’ ಹಾಡನ್ನು ಬಳಕೆ ಮಾಡುವಂತಿಲ್ಲ. ಈ ಪ್ರಕರಣದ ಮರುವಿಚಾರಣೆಗೆ ಕೋರಲು ಅರ್ಜಿದಾರರಿಗೆ ಅವಕಾಶ ಇದೆ’ ಎಂದು ಬದ್ರುದೀನ್ ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ‘ಕಾಂತಾರ’ಕ್ಕೆ ಪ್ರಿಕ್ವೆಲ್ ಬರಲಿದೆ ಎಂದು ಹೇಳಿದ್ದರು.ಕಾಂತಾರ ಭಾಗ 2’ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದಾರೆ. ನೀವು ನೋಡಿರುವುದೇ ಎರಡನೇ ಪಾರ್ಟ್​. ಮುಂದೆ ಬರೋದು ಈ ಚಿತ್ರದ ಮೊದಲ ಭಾಗ’ ಎಂದು ರಿಷಬ್ ಶೆಟ್ಟಿ ಹೇಳಿದ್ದರು.

- Advertisement -

Latest Posts

Don't Miss