Film News : ದಿ ಡೀಲರ್ ಆಫ್ ಡೆತ್ ಅಂದರೆ ಸಾವಿನ ವ್ಯಾಪಾರಿ ಹೀಗಂತ ಟ್ಯಾಗ್ ಲೈನ್ ದೊರೆತಿದ್ದು ಆ ಒಬ್ಬ ನಟನಿಗೆ ಅದೂ ನೀಡಿದ್ದು ಡೃರೆಕ್ಟರ್ ಗಳೇ ಅಷ್ಟಕ್ಕೂ ಆ ನಟನಿಗೆ ಡೈರೆಕ್ಟರ್ ಗಳು ಈ ರೀತಿ ಟ್ಯಾಗ್ ಲೈನ್ ನೀಡಲು ಕಾರಣವೇನು..? ಯಾರು ಆ ನಟ ಹೇಳ್ತೀವಿ ಈ ಸ್ಟೋರಿಯಲ್ಲಿ….
ಬಾಲಿವುಡ್ ಅಂಗಳದಲ್ಲಿ ಸದ್ಯ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ ಅದು ಜವಾನ್ ಸಿನಿಮಾ ಬಾಲಿವುಡ್ನ ಜನಪ್ರಿಯ ನಟ ಶಾರುಖ್ ಖಾನ್ ಅಭಿನಯಿಸುತ್ತಿರುವ ಹೊಸ ಸಿನಿಮಾ ಜವಾನ್. ಬಹುವಾಗಿಯೇ ಈ ಸಿನಿಮಾದ ಬಗ್ಗೆ ಜನರಿಗೆ ನಿರೀಕ್ಷೆ ಇದೆ.
ಸಿನಿಮಾದ ಪ್ರಚಾರ ಕಾರ್ಯ ಕೂಡಾ ಭರದಿಂದ ಸಾಗುತ್ತಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಜುಲೈ 24 ಸೋಮವಾರ ಹೊಸ ಪೋಸ್ಟರ್ ಬಿಡುಗಡೆ ಕೂಡಾ ಮಾಡಲಾಗಿದೆ. ‘ಜವಾನ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿರುವುದು ವಿಜಯ್ ಸೇತುಪತಿ. ಅವರ ಗೆಟಪ್ ಹೇಗಿರಲಿದೆ ಎಂಬುದು ಈ ಫೋಸ್ಟರ್ನಲ್ಲಿ ಗೊತ್ತಾಗಿದೆ. ವಿಜಯ್ ಸೇತುಪತಿ ಅಭಿಮಾನಿಗಳ ವಲಯದಲ್ಲಿ ಇದೀಗ ಈ ಪೋಸ್ಟರ್ ವೈರಲ್ ಆಗಿದೆ.
ಹೊಸ ಪೋಸ್ಟರ್ ನಲ್ಲಿ ಸಾವಿನ ವ್ಯಾಪಾರಿ ಎಂಬುವುದಾಗಿ ವಿಜಯ್ ಸೇತುಪತಿ ಅವರ ಈ ಪೋಸ್ಟರ್ ಗೆ ಟ್ಯಾಗ್ ಲೈನ್ ನೀಡಲಾಗಿದೆ. ಸದ್ಯ ಇದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಮೂಲಕ ಈ ಸಿನಿಮಾದಲ್ಲಿ ವಿಜಯ್ ಸೇತುಪತಿಯ ನಟನೆ ಭಯಂಕರವಾಗಿರಲಿದೆ ಎಂಬುವುದಾಗಿ ಸುಳಿವು ಕೂಡಾ ನೀಡಿದ್ದಾರೆ.
There's no stopping him… or is there? Watch out! #VijaySethupathi #JawanPrevue Out Now! #Jawan releasing worldwide on 7th September 2023, in Hindi, Tamil & Telugu. pic.twitter.com/BdD3OKttMZ
— Shah Rukh Khan (@iamsrk) July 24, 2023
Megastar Chiranjivi: ಚಿರಂಜೀವಿ ಪುತ್ರಿ ಶ್ರೀಜಾ ಸಂಸಾರದಲ್ಲಿ ಬಿರುಕು…!
’ಹಾಸ್ಟೆಲ್ ಹುಡುಗರ’ ಸಕ್ಸಸ್ ಪಾರ್ಟಿಗೆ ಸಾಥ್ ಕೊಟ್ಟ ಶಿವಣ್ಣ..HHB ಸಿನಿಮಾ ಬಗ್ಗೆ ಏನಂದ್ರು ಮಾಸ್ ಲೀಡರ್?