- Advertisement -
ವಿಜಯಪುರ: ಜಿಲ್ಲೆಯ ಹಲವೆಡೆ ರಾತ್ರಿ ಭೂಮಿ ಮತ್ತೆ ಕಂಪಿಸಿದೆ ಎಂದು ಜನರು ಗಾಬರಿಯಿಂದ ಹೊರಗೆ ಬಂದಿದ್ದಾರೆ. ತಿಕೋಟಾ ಪಟ್ಟಣ, ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಕಂಪಿಸಿದೆ. ರಾತ್ರಿ ಮೂರರಿಂದ ಬೆಳಿಗ್ಗೆ 5ರ ವರೆಗೆ ಹಲವು ಬಾರಿ ಭೂಮಿ ಕಂಪಿಸಿದೆ ಎಂದು ಜನರು ಹೇಳುತ್ತಿದ್ದಾರೆ. ಆತಂಕದಿಂದ ಮನೆಯಿಂದ ಜನರು ಹೊರಗೆ ಬಂದಿದ್ದಾರೆ. ವಿಜಯಪುರದಲ್ಲಿ ಕಳೆದ 2 ವರ್ಷದಿಂದ ಹಲವು ಬಾರಿ ಭೂಮಿ ಕಂಪಿಸುತ್ತಿದ್ದು, ಭೂಕಂಪದಿಂದ ಜಿಲ್ಲೆಯ ಜನರು ಆತಂಕಕ್ಕೊಳಗಿದ್ದಾರೆ.
ಇಂದಿನಿಂದ 3 ದಿನಗಳ ಕಾಲ ಪಾಂಡವಪುರದಲ್ಲಿ ‘ಪುನೀತೋತ್ಸವ’
- Advertisement -