Vijayapura: ವಕ್ಫ್ ವಿರುದ್ಧ ಮಠಾಧೀಶರ ಬೃಹತ್‌ ಪ್ರತಿಭಟನಾ ಜಾಥಾ

Vijayapura: ವಕ್ಫ್ ಬೋರ್ಡ್ ಹಲವು ರೈತರು, ಮಠದ ಜಾಗ, ಶಾಲಾ ಕಾಲೇಜಿನ ಜಾಗ, ದೇವಸ್ಥಾನ, ಮೈದಾನದ ಜಾಗವೆಲ್ಲ ತಮ್ಮದು ಎಂದು ನೋಟೀಸ್ ಕಳುಹಿಸಿದೆ. ಈ ವಿರುದ್ಧ ರಾಜ್ಯದೆಲ್ಲೆಡೆ ಹಿಂದೂಗಳು ಆಕ್ರೋಶ ಹೊರಹಾಕಿದ್ದು, ವಿಜಯಪುರದಲ್ಲಿ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಸರ್ಕಾರ ವಕ್ಫ್ ಬೋರ್ಡನ್ನೇ ರದ್ದುಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದು, ರೈತರ ಪ್ರತಿಭಟನೆಗೆ, ವಿಶ್ವ ಹಿಂದೂ ಪರಿಷತ್, ಮಠಾಧೀಶರು, ಭಾರತೀಯ ಕಿಸಾನ್ ಸಂಘ ಸಾಥ್ ನೀಡಿದೆ. ಸೋಮವಾರ ವಿಜಯಪುರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಜಾಥಾ ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳಿಗೆ ವಕ್ಫ್ ಬೋರ್ಡ್ ರದ್ದುಗೊಳಿಸಲು ಮನವಿ ಪತ್ರ ನೀಡಿದರು.

ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಈ ಜಾಥಾ ನಡೆದಿದ್ದು, ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ, ಹಲವು ಗಣ್ಯರು, ಮಠಾಧೀಶರು, ಹಿಂದೂ ಕಾರ್ಯಕರ್ತರು ಸೇರಿ ಹಲವು ರೈತರು ಧರಣಿ ಜಾಥಾದಲ್ಲಿ ಭಾಗವಹಿಸಿದ್ದರು.

About The Author