Thursday, December 4, 2025

Latest Posts

B. Y. Vijayendra ; ಸಿಎಂ ಸಿದ್ಧರಾಮಯ್ಯ ವಿರುದ್ಧ ವಿಜಯೇಂದ್ರ ವಾಗ್ದಾಳಿ: ಮೂಡಾ ಹಗರಣ ಸಿಬಿಐಗೆ ವಹಿಸಿ

- Advertisement -

ಹುಬ್ಬಳ್ಳಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾದ ಮಾಜಿ ಸಚಿವರನ್ನು ಇನ್ನಿತರರನ್ನು ಉಳಿಸುವ ಕಾರ್ಯವನ್ನು ಸಿಎಂ ಸಿದ್ಧರಾಮಯ್ಯ ಮಾಡಿದ್ದಾರೆ. ಈಗಾಗಲೇ ಎಸ್ಐಟಿ ಚಾರ್ಜ್ ಸೀಟ್ ನಲ್ಲಿಯೂ ನಾಗೇಂದ್ರ ಹಾಗೂ ದದ್ದಲ್ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

 

ಕೇಂದ್ರ ಸಚಿವರ ನಿವಾಸಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ಧರಾಮಯ್ಯನವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡದೇ ಇಲ್ಲ ಎಂಬುವ ದಾಟಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ಮುಡಾ ಹಗರಣದಲ್ಲಿ ಕಾನೂನು ಬಾಹಿರವಾಗಿ ಸಿಎಂ ಅವರ ಧರ್ಮ ಪತ್ನಿಗೆ ಪಡೆದಿದ್ದಾರೆ. ಬಡವರ ಪಾಲಿಗೆ ಬರಬೇಕಿದ್ದ ಮೂಡಾ ನಿವೇಶನಗಳನ್ನು ಲೂಟಿ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದೆ. ನೈತಿಕತೆಯಿದ್ದರೇ ಸಿಎಂ ಸಿದ್ಧರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

 

 

ಇನ್ನೂ ಐದು ಸಾವಿರ ಕೋಟಿಗೂ ಅಧಿಕ ಬೆಲೆಯ ಮೂಡಾ ನಿವೇಶನದಲ್ಲಿ ಅವ್ಯವಹಾರ ಆಗಿದ್ದು, ಈ ಹಗರಣದ ತನಿಖೆಯನ್ನು ಸಿದ್ಧರಾಮಯ್ಯನವರು ಸಿಬಿಐಗೆ ವಹಿಸಬೇಕಿದೆ. ಯಾವುದೇ ಅವ್ಯವಹಾರ ಮಾಡಿಲ್ಲ ಎಂದಾದರೇ ಸಿಬಿಐಗೆ ನೀಡಿ ಎಂದು ಒತ್ತಾಯಿಸಿದರು.

- Advertisement -

Latest Posts

Don't Miss