Friday, July 11, 2025

Latest Posts

ಬಿಜೆಪಿ ಹಾದಿಯಲ್ಲಿ ಕಾಂಗ್ರೆಸ್‌, ಇಳಿಯುತ್ತಾರಾ ಸಿದ್ದು? : ವಿಜಯೇಂದ್ರ ಸಿಡಿಸಿದ ಬಾಂಬ್‌ಗೆ “ಕೈ” ನಲ್ಲಿ ತಳಮಳ

- Advertisement -

ಬೆಂಗಳೂರು : ರಾಜ್ಯದ ಕಾಂಗ್ರೆಸ್‌ ಸರ್ಕಾರದಲ್ಲಿ ನಾಯತ್ವ ಬದಲಾವಣೆಯ ಚರ್ಚೆಗಳಿಗೆ ತಾತ್ಕಾಲಿಕವಾಗಿ ಬ್ರೇಕ್‌ ಹಾಕುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆ. ಆ ಸ್ಥಾನಕ್ಕೆ ಡಿಕೆ ಶಿವಕುಮಾರ್‌ ಬಂದು ಕೂರುತ್ತಾರೆ ಎಂಬೆಲ್ಲ ಚರ್ಚೆಗಳಿಗೆ ಕೆಲ ಶಾಸಕರು ಮುಂದಾಗಿದ್ದರು.

ಇದಕ್ಕೆ ಪೂರಕವಾಗಿಯೇ ತಮ್ಮ ಹೇಳಿಕೆಗಳನ್ನೂ ಸಹ ನೀಡುತ್ತಿದ್ದರು. ಆದರೆ ಇದಕ್ಕೆಲ್ಲಾ ಖುದ್ದು ಎಐಸಿಸಿ ಉಸ್ತುವಾರಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಫುಲ್‌ ಸ್ಟಾಪ್‌ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಒಳಗೊಳಗೆ ಹೈಕಮಾಂಡ್‌ ಬೇರೆ ಲೆಕ್ಕಾಚಾರ ಹಾಕಿದಂತೆ ಕಂಡು ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣ ಹಾಗೂ ಸಿದ್ದರಾಮಯ್ಯ ನಿಷ್ಠ ಬಣದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಈಗಾಗಲೇ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ಹೊಸ ಬಾಂಬ್‌ ಸಿಡಿಸಿದ್ದಾರೆ. ಹೈಕಮಾಂಡ್‌ ಇದಕ್ಕಾಗಿಯೇ ರಾಜ್ಯಕ್ಕೆ ಸುರ್ಜೇವಾಲಾ ಅವರನ್ನು ಕಳುಹಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಕೆಲಸಕ್ಕೆ ಹೈಕಮಾಂಡ್‌ ಮುಂದಾಗಿದೆ.

ಈ ಮೂಲಕ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕಳುಹಿಸಲು ಕೈ ಪಾಳಯದಲ್ಲಿ ವೇದಿಕೆ ಸಿದ್ದವಾಗುತ್ತಿದೆ ಎಂದು ಹೇಳುವ ಮೂಲಕ ಅವರು ಕೈ ನಲ್ಲಿ ತಳಮಳ ಸೃಷ್ಟಿಸಿದ್ದಾರೆ. ಇನ್ನೂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಪಕ್ಷದ ಒಬಿಸಿ ಸಲಹಾ ಸಮಿತಿಗೆ ಅಧ್ಯಕ್ಷರಾಗಿ ಮಾಡಿದ್ದಾರೆ. ಅಂದ್ರೆ ಇದರ ಅರ್ಥ, ಸಿದ್ದರಾಮಯ್ಯ ಅವರು ದೆಹಲಿಗೆ ಶಿಫ್ಟ್‌ ಆಗುವುದು ನಿಶ್ಚಿತ ಎಂದು ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಈ ನೇಮಕದ ಬಗ್ಗೆ ನನಗೆ ಗೊತ್ತಿಲ್ಲ. ಎಐಸಿಸಿಯವರ ಜೊತೆಗೆ ಮಾತನಾಡುತ್ತೇನೆ. ಜುಲೈ 15 ರಂದು ಒಂದು ಸಭೆ ಮಾಡಿ ಅಂತಾ ನನಗೆ ಹೇಳಿದ್ದಾರೆ. ಒಬಿಸಿ ಅಧ್ಯಕ್ಷರು ಕರ್ನಾಟಕದಲ್ಲಿ ಸಭೆ ಮಾಡಿ ಅಂದಿದ್ದರು. ಸಂಚಾಲಕರನ್ನಾಗಿ ಮಾಡಿದ್ದಾರೋ, ಚೇರ್ಮನ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಈ ಬಗ್ಗೆ ಹೈಕಮಾಂಡ್ ಜೊತೆಗೆ ಮಾತನಾಡುತ್ತೇನೆ. ನಾನು ಕೇಳಿಲ್ಲ, ಅವರು ಘೋಷಣೆ ಮಾಡಿದ್ದಾರೆ. ರಾಷ್ಟ್ರ ರಾಜಕಾರಣ ಅಲ್ಲ,ಅದೇನು ಅಂತಾ ಘೋಷಣೆ ಮಾಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಪ್ರಮುಖವಾಗಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಿರುವ ಹೈಕಮಾಂಡ್‌, ಬಿಜೆಪಿ ದಾಳಿಯುವ ಯೋಚನೆಯಲ್ಲಿದೆಯಾ ಎನ್ನುವ ಅನುಮಾನಗಳು ದಟ್ಟವಾಗಿವೆ.

ಈ ಹಿಂದೆ ಕಳೆದ 2021ರಲ್ಲಿ ಬಿಜೆಪಿ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಒತ್ತಾಯಪೂರ್ವಕವಾಗಿ ವಯಸ್ಸಿನ ನೆಪವೊಡ್ಡಿ ಕೆಳಗಿಳಿಸಿತ್ತು. ಬಳಿಕ ಅವರನ್ನು ಬಿಜೆಪಿ ಸಂಸದೀಯ ಮಂಡಳಿಗೆ ಸದಸ್ಯರನ್ನಾಗಿಸಿತ್ತು. ಆದರೆ ಸಿದ್ದರಾಮಯ್ಯ ಅವರ ವಿಚಾರದಲ್ಲೂ ಇದೀಗ ಕಾಂಗ್ರೆಸ್‌ ನಡೆ ನಿಗೂಢವಾಗಿದ್ದರೂ ಸಹ ಅದೇ ದಾರಿ ತುಳಿಯುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರ ಗಮನಕ್ಕೆ ತರದೇ ಅವರನ್ನು ಎಐಸಿಸಿ ಮಹತ್ವದ ಸ್ಥಾನಕ್ಕೆ ನೇಮಕ ಮಾಡಿದೆ ಎಂದರೆ ಇದರ ಹಿಂದೆ ಸಿಎಂ ಬದಲಾವಣೆಯ ದೊಡ್ಡ ಪ್ಲಾನ್‌ ಅಡಗಿರುವ ಚರ್ಚೆಗಳಿಗೆ ಇನ್ನಷ್ಟು ರೆಕ್ಕೆ ಪುಕ್ಕಗಳು ಬಂದಂತಾಗುತ್ತಿದೆ.

ಇನ್ನೂ ನಾಲ್ವರು ಮಾಜಿ ಮುಖ್ಯಮಂತ್ರಿಗಳು, 24 ಸದಸ್ಯರ ಸಲಹಾ ಮಂಡಳಿಗೆ ನೇಮಕವಾಗಿರುವ ಸಿಎಂ ಸಿದ್ದರಾಮಯ್ಯ ಈ ಮೂಲಕ ರಾಷ್ಟ್ರ ಮಟ್ಟದ ಹುದ್ದೆಯನ್ನೂ ನಿಭಾಯಿಸುವುದರ ಜೊತೆಗೆ ದೆಹಲಿ ಮಟ್ಟದ ರಾಜ್ಯ ಕಾರಣಕ್ಕೆ ಎಂಟ್ರಿ ನೀಡಲಿದ್ದಾರಾ ಎನ್ನುವ ಪ್ರಶ್ನೆಗಳಿಗೆ ಹೈಕಮಾಂಡ್‌ ನಡೆ ಕಾರಣವಾಗಿದೆ.

ಈ ನೇಮಕದ ಹಿಂದೆ ಇನ್ನೊಂದು ಗಮನಾರ್ಹ ಸಂಗತಿಯನ್ನು ನೋಡುವುದಾದರೆ, ಸಿಎಂ ಸಿದ್ದರಾಮಯ್ಯ ಹಿರಿಯ ಮುತ್ಸದ್ದಿ ರಾಜಕಾರಣಿ, ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ನಾಯಕರಾಗಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠರಾಗಿ ಪಕ್ಷದ ಕುರಿತು ತಮ್ಮದೇ ಆದ ವಿಶೇಷ ಕಾಳಜಿಯನ್ನು ಹೊಂದಿದ್ದಾರೆ. ಹೀಗಾಗಿ ಅವರ ಅನುಭವವನ್ನು ಬಳಸಿಕೊಂಡು ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಯೋಚನೆಯಲ್ಲಿ ಕೈ ನಾಯಕರು ಇದ್ದಾರೆ ಎಂದು ಹೇಳಲಾಗುತ್ತಿದೆ.

ಅದರೆ ಮುಖ್ಯವಾಗಿ ಕಾಂಗ್ರೆಸ್‌ ಸರ್ಕಾರದಲ್ಲಿ ಕೆಲ ಶಾಸಕರು ಸಚಿವರು, ಎಲ್ಲವೂ ಸರಿಯಿದೆ ಎಂದು ಹೇಳಿಕೊಳ್ಳುತ್ತಿದ್ದೆ, ಇನ್ನುಳಿದವರು ತಮ್ಮದೇ ಆದ ರೀತಿಯಲ್ಲಿ ನಾಯಕತ್ವದ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಆದರೆ ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ನಡುವೆ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಡೆದಿದ್ದು, ಅದಕ್ಕೆ ಪೂರಕ ಬೆಳವಣಿಗೆ ಎನ್ನುವಂತೆ ಹೈಕಮಾಂಡ್‌ ನಡೆಯು ರಾಜ್ಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

- Advertisement -

Latest Posts

Don't Miss